ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು

Update: 2018-02-13 18:46 GMT

ಸೈಂಟ್‌ಜಾರ್ಜ್ಸ್ ಪಾರ್ಕ್, ಫೆ.13: ದಕ್ಷಿಣ ಆಫ್ರಿಕ ವಿರುದ್ಧದ ಐದನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 73 ರನ್‌ಗಳ ಜಯ ಗಳಿಸಿದ್ದು, ಇದರೊಂದಿಗೆ ಭಾರತ ದಕ್ಷಿಣ ಆಫ್ರಿಕ ನೆಲದಲ್ಲಿ 4-1 ಅಂತರದಲ್ಲಿ ಸರಣಿ ಗೆದ್ದುಕೊಂಡು ಇತಿಹಾಸ ಬರೆದಿದೆ.

ಗೆಲುವಿಗೆ 275 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ ಕುಲ್‌ದೀಪ್ ಯಾದವ್(57ಕ್ಕೆ 4), ಯಜುವೇಂದ್ರ ಚಹಾಲ್(43ಕ್ಕೆ 2), ಹಾರ್ದಿಕ್ ಪಾಂಡ್ಯ (30ಕ್ಕೆ 2) ಮತ್ತು ಜಸ್‌ಪ್ರೀತ್ ಬುಮ್ರಾ (22ಕ್ಕೆ 1) ದಾಳಿಗೆ ಸಿಲುಕಿ 42.2 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲೌಟಾಗಿದೆ.

ಆಫ್ರಿಕದ ಹಾಶಿಂ ಅಮ್ಲ ಅರ್ಧಶತಕ (71), ಹಂಗಾಮಿ ನಾಯಕ ಮರ್ಕರಮ್(32), ಮಿಲ್ಲರ್(36), ಕ್ಲಾಸೆನ್(39) ಎರಡಂಕೆಯ ಕೊಡುಗೆ ನೀಡಿದರು.

ಡುಮಿನಿ 1ರನ್, ಎಬಿಡಿವಿಲಿಯರ್ಸ್‌ 6ರನ್, ರಬಾಡ 3ರನ್, ಮೊರ್ಕಲ್ 1 ರನ್ , ಗಿಡಿ ಔಟಾಗದೆ 4 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News