ಬೆಂಗಳೂರು: ಎಂಐಟಿಯು ಸಂಸ್ಥೆಗೆ 50ಸಾವಿರ ಅಮೆರಿಕನ್ ಡಾಲರ್ ದೇಣಿಗೆ
Update: 2018-02-14 22:33 IST
ಬೆಂಗಳೂರು, ಫೆ.14: ಗೋಲ್ಡ್‌ಮನ್ ಸ್ಯಾಕ್ಸ್ ವತಿಯಿಂದ ಪ್ರತಿವರ್ಷ ಸರಕಾರೇತರ ಸಂಸ್ಥೆಗೆ ಕೊಡಮಾಡುವ ಒಂದು ಲಕ್ಷ ಅಮೆರಿಕನ್ ಡಾಲರ್ ಅನುದಾನವನ್ನು ಟವರ್ಡ್ಸ್ ಅಪ್‌ಲಿಫ್ಟ್‌ಮೆಂಟ್(50ಸಾವಿರ ಡಾಲರ್), ಸೇ ಟ್ರೀಸ್(30ಸಾವಿರ) ಮತ್ತು ಸೆಲ್ಕೋ ಫೌಂಡೇಷನ್(30ಸಾವಿರ ರೂ.) ಹಂಚಿಕೊಂಡಿವೆ.
ಎಂಐಟಿಯು ಮಹಿಳೆಯರಲ್ಲಿ ಸ್ವಚ್ಛತೆಯ ಮೂಲಭೂತ ಪ್ರಾಮುಖ್ಯತೆಯ ಕುರಿತು ಶಿಕ್ಷಣ ಮತ್ತು ಅರಿವು ಮೂಡಿಸುತ್ತಿದೆ. ಹಾಗೂ ಸ್ಯಾನಿಟರಿ ಉತ್ಪನ್ನಗಳು ದೊರೆಯುವಂತೆ ಮಾಡುತ್ತಿದೆ. ಸೇ ಟ್ರೀಸ್ ಗಿಡಗಳನ್ನ ನೆಡುವುದು ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಪ್ರಚುರಪಡಿಸುತ್ತಿದೆ. ಸೆಲ್ಕೋ ಫೌಂಡೇಷನ್ ಗ್ರಾಮೀಣ ಶಾಲೆಗಳಲ್ಲಿ ಗುಣಮಟ್ಟವನ್ನು ಹೆಚ್ಚಿಸಲು ಸೌರ ಶಕ್ತಿಯನ್ನು ಬಳಸಿಕೊಂಡು ಡಿಜಿಟಲ್ ಶಿಕ್ಷಣ ಪಠ್ಯವನ್ನು ಒದಗಿಸುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.