ಭಾಂಬ್ರಿ ಸೆಮಿ ಫೈನಲ್ ಗೆ

Update: 2018-02-15 18:30 GMT

ಚೆನ್ನೈ, ಫೆ.15: ಭಾರತದ ಸ್ಟಾರ್ ಆಟಗಾರ ಯೂಕಿ ಭಾಂಬ್ರಿ ಚೆನ್ನೈ ಓಪನ್ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಇಲ್ಲಿನ ಎಸ್‌ಡಿಎಟಿ ಟೆನಿಸ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾಂಬ್ರಿ ಜಪಾನ್‌ನ ಯಸುಟಕಾ ಉಚಿಯಾಮಾರನ್ನು 5-7, 6-2, 6-4 ಸೆಟ್‌ಗಳಿಂದ ಮಣಿಸಿದ್ದಾರೆ. ಭಾಂಬ್ರಿ ಮುಂದಿನ ಸುತ್ತಿನಲ್ಲಿ ಡಕ್‌ಹೀ ಲೀ ಅವರನ್ನು ಎದುರಿಸಲಿದ್ದಾರೆ. ಲೀ ಮತ್ತೊಂದು ಪಂದ್ಯದಲ್ಲಿ ಶ್ರೇಯಾಂಕರಹಿತ ಆ್ಯಂಟನಿ ಎಸ್ಕೊಫರ್‌ರನ್ನು ಮಣಿಸಿದರು.

ಅಗ್ರ ಶ್ರೇಯಾಂಕ ಜೋರ್ಡನ್ ಥಾಮ್ಸನ್ ಎದುರಾಳಿ ಡ್ಯಾನಿಲೊ ಪೆಟ್ರೊವಿಕ್ ಗಾಯಗೊಂಡು ನಿವೃತ್ತಿಯಾದ ಹಿನ್ನೆಲೆಯಲ್ಲಿ ಅಂತಿಮ-4ರ ಸುತ್ತು ತಲುಪಿದರು. ಆಸ್ಟ್ರೆಲಿಯದ ಥಾಮ್ಸನ್ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಪೆಡ್ರೊ ಮಾರ್ಟಿನೆಝ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News