ಪಡಿತರ ವಿತರಕರಿಗೆ ಲಾಭಾಂಶ ಹೆಚ್ಚಳ

Update: 2018-02-16 15:03 GMT

ಬೆಂಗಳೂರು, ಫೆ. 16: ತಾಯಿ ಹಾಗೂ ಸಹೋದರಿಯರ ಆರೋಗ್ಯ ಸುಧಾರಿಸಿ, ಮಾಲಿನ್ಯಗೊಳಿಸುವಂತಹ ಇಂಧನಗಳ ಮೇಲಿನ ಅವಲಂಬನೆ ತಡೆಗಟ್ಟಲು 1,350 ಕೋಟಿ ರೂ.ವೆಚ್ಚದಲ್ಲಿ 30ಲಕ್ಷ ಕುಟುಂಬಗಳಿಗೆ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯಡಿ ಉಚಿತ ಅನಿಲ ಸಂಪರ್ಕ, 2 ಬರ್ನರ್ ಉಳ್ಳ ಗ್ಯಾಸ್‌ಸ್ಟೌವ್ ಮತ್ತು 2 ಸಿಲಿಂಡರ್‌ಗಳನ್ನು ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ 2018-19ನೆ ಸಾಲಿನ ಆಯವ್ಯಯ ಮಂಡಿಸಿದ ಅವರು, ಪಡಿತರ ವಿತರಕರಿಗೆ ಲಾಭಾಂಶವನ್ನು ಪ್ರತಿ ಕ್ವಿಂಟಾಲ್‌ಗೆ ಹಾಲಿ ಇರುವ 87ರೂ. ಗಳಿಂದ 100ರೂ.ಗಳಿಗೆ ಹೆಚ್ಚಳ ಮಾಡಲಾಗುವುದು. ಇದರಿಂದ ಚಿಲ್ಲರೆ ಮಾರಾಟಗಾರರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಲು ‘ಅನ್ನಭಾಗ್ಯ’ ಯೋಜನೆಯನ್ನು ಮುಂದುವರಿಸಲಿದೆ. ಪ್ರಸಕ್ತ ಸಾಲಿನಲ್ಲಿ ಆಹಾರ ಇಲಾಖೆಗೆ ಒಟ್ಟಾರೆಯಾಗಿ 3,882 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News