ಪಶುಸಂಗೋಪನಾ ಇಲಾಖೆಗೆ 2,377 ಕೋಟಿ ರೂ.ಅನುದಾನ

Update: 2018-02-16 15:31 GMT

ಬೆಂಗಳೂರು, ಫೆ.16: ಪಶುಸಂಗೋಪನೆ ಇಲಾಖೆಗೆ 2018-19ನೆ ಸಾಲಿನ ಆಯವ್ಯಯದಲ್ಲಿ 2377ಕೋಟಿ ರೂ. ಅನುದಾನ ನೀಡಲಾಗಿದೆ.

* ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಹಣಕಾಸು ನೆರವಿನಿಂದ ಕುರಿ ಮತ್ತು ಆಡು ಸಾಕಣೆಗೆ ಸಂಬಂಧಿಸಿದ 25 ಸಾವಿರ ಘಟಕಗಳನ್ನು ಸ್ಥಾಪಿಸಿ, ಎನ್‌ಸಿಡಿಸಿ ನೀಡುವ 187.50ಕೋಟಿ ರೂ.ಸಾಲಕ್ಕೆ ಸರಕಾರ ವತಿಯಿಂದ ಖಾತ್ರಿ ನೀಡಲಾಗುವುದು.

* ರಾಜ್ಯ ಮೇವು ಭದ್ರತಾ ನೀತಿ ರೂಪಿಸಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

* ಕುರಿಗಳು ಮತ್ತು ಕುರಿಗಾರರ ರಕ್ಷಣೆಗಾಗಿ ಟೆಂಟು, ಕಬ್ಬಿಣದ ತಂತಿ ಬೇಲಿ ಮತ್ತು ಇತರೆ ಸಾಮಗ್ರಿಗಳನ್ನು ನೀಡಲು ಪ್ರಸಕ್ತ ಸಾಲಿನಲ್ಲಿ 4 ಕೋಟಿ ರೂ.ಅನುದಾನ ಒದಗಿಸಲಾಗಿದೆ.

* ಕುರಿ ಮತ್ತು ಮೇಕೆಗಳ ಚರ್ಮದ ವೌಲ್ಯವರ್ಧನೆಗಾಗಿ 2 ಕೋಟಿ ರೂ.ಗಳ ವೆಚ್ಚದಲ್ಲಿ ಚರ್ಮ ಸಂಸ್ಕರಣಾ ಕೇಂದ್ರವನ್ನು ಸ್ಥಾಪಿಸಲಾಗುವುದು.

* 16 ಜಿಲ್ಲೆಗಳಲ್ಲಿ ಸುಸಜ್ಜಿತ ರೋಗ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಗದಗ, ಕೊಪ್ಪಳ, ವಿಜಯಪುರ, ರಾಯಚೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸ್ಥಾಪಿಸಲು 3ಕೋಟಿ ರೂ.ಅನುದಾನವನ್ನು ನಿಗದಿಪಡಿಸಲಾಗಿದೆ.

* ರಾಜ್ಯದಲ್ಲಿ 75 ಕುರಿ-ಮೇಕೆ ಮಾರುಕಟ್ಟೆಗಳನ್ನು ತೂಕದ ಯಂತ್ರ, ನೀರಿನ ಸೌಲಭ್ಯ, ಕುರಿ ಮಂದೆಗಳನ್ನು ಕೂಡಲು ತಂತಿ ಬೇಲಿ, ನೆರಳಿನ ವ್ಯವಸ್ಥೆ ಅಳವಡಿ ಸಿ 7.50 ಕೋಟಿ ರೂ.ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುವುದು.

 * 14ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಪ್ರತಿ ಲೀಟರ್ ಹಾಲಿಗೆ 20 ಪೈಸೆಯಂತೆ ಒಟ್ಟು 55 ಕೋಟಿ ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು.

ಕುರಿ ಮತ್ತು ಮೇಕೆ ಸಾಕಾಣಿಕೆಗಾಗಿ ಸಹಕಾರಿ ಬ್ಯಾಂಕುಗಳಿಂದ ಸಾಕಾಣಿಕೆಗಾರರು ಪಡೆದಿರುವ ಮಧ್ಯಮಾವಧಿ ಸಾಲವನ್ನು 50 ಸಾವಿರ ರೂ.ಮಿತಿಗೆ ಒಳಪಟ್ಟು, ಡಿ.31, 2017ರ ಅಂತ್ಯದವರೆಗೆ ಹೊರ ಬಾಕಿ ಹೊಂದಿರುವ ಮೊತ್ತವನ್ನು ಮನ್ನಾ ಮಾಡಲಾಗುವುದು. ಇದರಿಂದ 12,205 ಸಾಕಾಣಿಕೆಗಾರರಿಗೆ 52 ಕೋಟಿ ರೂ.ಗಳಷ್ಟು ಪ್ರಯೋಜನವಾಗಲಿದೆ.

ಬಿಡಿಎ

*ನೀರು ಸರಬರಾಜು ಯೋಜನೆಗಳ ಮಾಹಿತಿ, ಪ್ರಮಾಣಿತ ಸೇವಾ ಮಟ್ಟದ ಸೂಚಕಗಳೂ ಒಳಗೊಂಡಂತೆ, ಮಾಹಿತಿ ತಂತ್ರಜ್ಞಾನ ಉಪಕರಣಗಳನ್ನು ಬಳಸಿಕೊಂಡು, ಸ್ಥಳೀಯ ಸಂಸ್ಥೆಯಲ್ಲಿ ನಿಯಮಿತ ಕಾಲದಲ್ಲಿ ಆಧುನೀಕರಿಸಿ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. *ನಗರ ಪ್ರದೇಶದ ಪ್ರತಿ ಮನೆಗೂ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಲಾಗಿದೆ. ಮೊದಲ ಹಂತದಲ್ಲಿ 2018-19ನೆ ಸಾಲಿನಲ್ಲಿ ರಾಜ್ಯದ ಹತ್ತು ಪಟ್ಟಣಗಳಲ್ಲಿ ಎಲ್ಲ ವಾಸದ ಮನೆಗಳಿಗೆ ಪ್ರತ್ಯೇಕ ಸಂಪರ್ಕ ಕಲ್ಪಿಸಲು ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News