ಆಯುಷ್ ಪ್ರವೇಶ ಪಡೆಯಬಯಸುವವರಿಗೆ ನೀಟ್ ಅರ್ಹತೆ ಕಡ್ಡಾಯ

Update: 2018-02-16 18:08 GMT

ಬೆಂಗಳೂರು, ಫೆ. 16: ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ ಹಾಗೂ ಹೋಮಿಯೋಪತಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಸುವವರು ಕಡ್ಡಾಯವಾಗಿ ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ(ನೀಟ್)-2018 ರಲ್ಲಿ ಅರ್ಹತೆಯನ್ನು ಪಡದಿರಬೇಕು.

ನೀಟ್ ಪರೀಕ್ಷೆಯಲ್ಲಿನ ಅರ್ಹತೆ ಹಾಗೂ ಸಿಇಟಿ ಪ್ರವೇಶ ನಿಯಮ ಅಥವಾ ಸರಕಾರದ ಆದೇಶದನ್ವಯ ಆಯುಷ್ ರ್ಯಾಂಕ್ ಅನ್ನು ನಿರ್ಧರಿಸಲಾಗುವುದು ಹಾಗೂ ಸೀಟು ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು. ಹೀಗಾಗಿ, ಆಯುಷ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಹತೆಯನ್ನು ಪಡೆಯಬಯಸುವ ಅಭ್ಯರ್ಥಿಗಳು ನೀಟ್ ಪರೀಕ್ಷೆಗೆ ನೋಂದಣಿ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News