ಮಹತ್ವದ ನಿರ್ಧಾರ ಕಾರ್ಯಗತವಾಗಲಿ

Update: 2018-02-16 18:44 GMT

ಮಾನ್ಯರೇ,

ಈ ಹಿಂದೆ ರಾಜ್ಯ ಸರಕಾರ 1990ರ ಎಪ್ರಿಲ್ 14ಕ್ಕಿಂತ ಮುಂಚೆ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಸಕ್ರಮ ಮಾಡಲು ಅವಕಾಶ ನೀಡಿತ್ತು. ಇದೀಗ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಈ ಅವಧಿಯನ್ನು ವಿಸ್ತರಿಸಲಾಗಿದೆ. ಈ ಹೊತ್ತಿನಲ್ಲಿ ಇದೊಂದು ಮಹತ್ವದ ನಿರ್ಧಾರವಾಗಿದ್ದು ಇದರಿಂದ ಲಕ್ಷಾಂತರ ರೈತರಿಗೆ, ಬಗರ್‌ಹುಕುಂ ಸಾಗುವಳಿದಾರರಿಗೆ ಉಪಯೋಗವಾಗಲಿದೆ. ಆದರೆ ಚುನಾವಣಾ ಹೊತ್ತಿನಲ್ಲಿ ಇಂತಹ ನಿರ್ಧಾರ ಮಾಡಿರುವ ಸರಕಾರ ಇದರ ಹಿಂದೆ ಚುನಾವಣಾ ಓಲೈಕೆಯ ಉದ್ದೇಶ ಇಟ್ಟುಕೊಳ್ಳದೆ ಈ ನಿರ್ಧಾರ ಕಾರ್ಯಗತವಾಗುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕಾಗಿದೆ.
ರಾಜ್ಯದಲ್ಲಿ ಅರ್ಹರಿಗೆ ಇನ್ನೂ ಭೂಮಿ ವಿಲೇವಾರಿಯಾಗಿಲ್ಲ. ಸಕ್ರಮ ದಾಖಲೆ ಪಡೆಯುವುದಕ್ಕೆ ಅಲೆಯುವ ಮಂದಿ ಅನೇಕರಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಹಕ್ಕು ಪತ್ರ ವಿತರಣೆ ಇನ್ನೂ ಮುಗಿದಿಲ್ಲ. ಹೀಗಾಗಿ ಗೊಂದಲ ಇನ್ನೂ ಇದೆ. ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಸರಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಮಂದಿ ಅನೇಕರಿದ್ದಾರೆ. ಇವರಿಗೆ ಇನ್ನೂ ಅಧಿಕೃತವಾಗಿ ಸಕ್ರಮದ ದಾಖಲೆ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನವಸತಿ ಪ್ರದೇಶಗಳನ್ನು ‘ಕಂದಾಯ ಗ್ರಾಮ’ ಎಂದು ಘೋಷಿಸಬೇಕೆಂಬ ಮನವಿಗೂ ಸರಕಾರ ಸ್ಪಂದಿಸಬೇಕು. ಈ ಮೂಲಕ ಎಲ್ಲರಿಗೂ ಸಮಾನ ಬದುಕುವ ಅವಕಾಶ ನೀಡಬೇಕಾಗಿದೆ.

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News