ಸೀಬ್ ಝೋನ್ ವತಿಯಿಂದ ಕೆ.ಸಿ.ಎಫ್. ಡೇ ಆಚರಣೆ

Update: 2018-02-17 04:20 GMT

ಮಸ್ಕತ್, ಫೆ. 17: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಸೀಬ್ ಝೋನ್ ವತಿಯಿಂದ 5ನೆ ಕೆ.ಸಿ.ಎಫ್. ದಿನಾಚರಣೆಯನ್ನು ಸುನ್ನೀ ಮದ್ರಸ ಸೀಬ್ ನಲ್ಲಿ ಆಚರಿಸಲಾಯಿತು.

ಸಭೆಯನ್ನು ಉದ್ಘಾಟಿಸಿದ ರಿಸಾಲ ಸ್ಟಡಿ ಸರ್ಕಲ್ ಒಮಾನ್ ರಾಷ್ಟೀಯ ಚೆಯರ್ ಮ್ಯಾನ್ ನಿಶಾದ್ ಅಹ್ಸನಿ, ನಂತರ ಮಾತನಾಡಿದರು. 

ಕೆ.ಸಿ.ಎಫ್ ಒಮಾನ್ ಗೌರವಾಧ್ಯಕ್ಷ ಉಮರ್ ಸಖಾಫಿ ಕಬಕ ಪ್ರಾರ್ಥಿಸಿ, ಮಾತನಾಡಿದ ಅವರು ಕೆ.ಸಿ.ಎಫ್ ನ ಹುಟ್ಟು ಹಾಗೂ ಬೆಳವಣಿಗೆಗಳ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಆಬಿದ್ ಅಲ್ ಹೈದ್ರೋಸ್ ಎಮ್ಮೆಮ್ಮಾಡು, ಐ.ಎನ್.ಸಿ ನೇತಾರ ಇಕ್ಬಾಲ್ ಬೊಳ್ಮಾರ್, ಪ್ರ. ಕಾರ್ಯದರ್ಶಿ ಹನೀಫ್ ಸಅದಿ ಕುಡ್ತಮುಗೇರು, ಇಹ್ಸಾನ್ ಚೆಯರ್ ಮ್ಯಾನ್ ಖಲಂದರ್ ಬಾವ ಮುಸ್ಲಿಯಾರ್ ಶುಭ ಹಾರೈಸಿದರು.

ಕಾರ್ಯಕರ್ತರು ತಮ್ಮ ಅನುಭವವನ್ನು ಹೇಳಿದರು. ಉತ್ತಮ ಕಾರ್ಯಕರ್ತರಿಗಾಗಿ ನೀಡುವ 'ಸಂಘಟನಾ ಚತುರ' ಪ್ರಶಸ್ತಿ ಯನ್ನು ಹನೀಫ್ ಕೆ.ಸಿ ರೋಡ್ ಅವರಿಗೆ ನೀಡಲಾಯಿತು. ಕಾರ್ಯಕರ್ತರಿಗಾಗಿ  ಕ್ವಿಝ್ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ಝೋನ್ ಅಧ್ಯಕ್ಷರಾದ ಝಾಕಿರ್ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ರಝಾಕ್ ಬರ್ಕ ಖಿರಾಅತ್ ಪಠಿಸಿದರು. ಕಾರ್ಯಕ್ರಮದಲ್ಲಿ ಬರ್ಕ ಸೆಕ್ಟರ್  ಅಧ್ಯಕ್ಷ  ಅಬ್ದುಲ್ ಖಾದರ್ ಎಚ್.ಕಲ್ಲು, ಸೀಬ್ ಯುನಿಟ್ ಅಧ್ಯಕ್ಷ ಹಂಝ ಮದನಿ ಸೇರಿದಂತೆ ಮಬೇಲಾ, ಬರ್ಕ, ಅಲ್ ಖೂದ್, ಅಲ್ ಹೇಲ್, ಸೀಬ್ ಸೆಕ್ಟರ್, ಯುನಿಟ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಸೀಬ್ ಝೋನ್ ಪ್ರ. ಕಾರ್ಯದರ್ಶಿ ಸ್ವಾದಿಕ್ ಸುಳ್ಯ ಸ್ವಾಗತಿಸಿ, ಬರ್ಕ ಸೆಕ್ಟರ್ ಪ್ರ. ಕಾರ್ಯದರ್ಶಿ ಹನೀಫ್ ಕೆ.ಸಿ ರೋಡ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News