ಬರಿಗೈಯಲ್ಲಿ ಶೌಚಾಲಯ ಶುಚಿಗೊಳಿಸಿದ ಬಿಜೆಪಿ ಸಂಸದ!

Update: 2018-02-18 08:15 GMT

ಹೊಸದಿಲ್ಲಿ, ಫೆ.18: ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ದನ ಮಿಶ್ರರ ವಿಡಿಯೋವೊಂದು ವೈರಲ್ ಆಗುತ್ತಿದೆ. ಶಾಲೆಯೊಂದಕ್ಕೆ ತೆರಳಿದ್ದ ಇವರು ಬರಿಗೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. 

ರೇವಾ ಜಿಲ್ಲೆಯ ಖಜೂಹಾ ಗ್ರಾಮದಲ್ಲಿ ಸಂಸದರು ಶೌಚಾಲಯ ಶುಚಿಗೊಳಿಸುತ್ತಿರುವ ವಿಡಿಯೊವನ್ನು ಎಎನ್‍ಐ ಸುದ್ದಿಸಂಸ್ಥೆ ಶೇರ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶೌಚಾಲಯದ ಬೇಸನ್ ಅನ್ನು ಬರಿಗೈಯಿಂದ ಮಿಶ್ರಾ ಶುಚಿಗೊಳಿಸುತ್ತಿದ್ದು, ಯಾವುದೇ ನೈರ್ಮಲ್ಯ ಸಾಧನಗಳನ್ನು ಬಳಸದಿರುವುದು ವಿಡಿಯೊ ದೃಶ್ಯಾವಳಿಯಲ್ಲಿ ಕಾಣುತ್ತದೆ. ಮಣ್ಣು ತುಂಬಿ ಕಟ್ಟಿಕೊಂಡಿದ್ದ ಶೌಚಾಲಯವನ್ನು ಮಿಶ್ರಾ ಶುಚಿಗೊಳಿಸಿದರು ಎಂದು ವರದಿ ಹೇಳಿದೆ.

ಈ ವಿಡಿಯೊವನ್ನು 1,600 ಮಂದಿ ಮರುಟ್ವೀಟ್ ಮಾಡಿದ್ದು, 3,000 ಮಂದಿ ಲೈಕ್ ಮಾಡಿದ್ದಾರೆ. ನಿನ್ನೆ ಒಂದೇ ರಾತ್ರಿ 30 ಸಾವಿರ ಬಾರಿ ಇದನ್ನು ವೀಕ್ಷಿಸಲಾಗಿದೆ. ಹಲವರು ಮಿಶ್ರಾ ಕ್ರಮವನ್ನು ಬೆಂಬಲಿಸಿದ್ದು, ಇದು ಉಳಿದ ರಾಜಕಾರಣಿಗಳಿಗೆ ಮಾದರಿ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News