×
Ad

ಸೈಬರ್ ಕ್ರೈಂ ಕೇಸ್ ದಾಖಲಿಸಲು ಸೂಚನೆ: ರಾಮಲಿಂಗಾರೆಡ್ಡಿ

Update: 2018-02-18 20:44 IST

ಬೆಂಗಳೂರು, ಫೆ.18: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕನ್ನಡದ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಾಕಿದ್ದರ ವಿರುದ್ಧ ಸೈಬರ್ ಕ್ರೈಂ ಕೇಸ್ ದಾಖಲಿಸಲು ಸೂಚನೆ ನೀಡಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ರವಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಐಎನ್‌ಟಿಯುಸಿ ಆಯೋಜಿಸಿದ್ದ ರಾಜ್ಯ ಮಟ್ಟದ ಇಂಟಕ್ ಸಮಾವೇಶದ ಬಳಿಕ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ಕನ್ನಡದ ಬಗ್ಗೆ ಮಾತನಾಡೋದು ಸರಿಯಲ್ಲ. ಅಲ್ಲದೆ, ಬಿಜೆಪಿ ಮುಖಂಡರುಗಳು ಮೋದಿಯ ಗಂಜಿ ಗಿರಾಕಿಗಳಾಗಿದ್ದು, ಮತ್ತೊಬ್ಬರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News