ಮೊಟ್ರೊದ ಮೊದಲ 2 ಬಾಗಿಲು ಮಹಿಳೆಯರಿಗೆ ಮೀಸಲು: ಫೆ.19ರಿಂದ ಪ್ರಾಯೋಗಿಕ ಸಂಚಾರ

Update: 2018-02-18 17:06 GMT

ಬೆಂಗಳೂರು, ಫೆ.18: ನಮ್ಮ ಮೆಟ್ರೊ ರೈಲಿನ ಮೊದಲ ಬೋಗಿಯ ಎರಡು ಬಾಗಿಲುಗಳನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದ್ದು, ಮಾ.1ರಿಂದ ಜಾರಿಗೆ ಬರಲಿದೆ. ಇದರ ಪ್ರಾಯೋಗಿಕ ಸಂಚಾರವನ್ನು ಫೆ.19ರಿಂದ ಪ್ರಾರಂಭಿಸಲಾಗುತ್ತಿದೆ ಎಂದು ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ತಿಳಿಸಿದರು.

ಬೆಳಗ್ಗೆ 8ಗಂಟೆಯಿಂದ 11.3ರವರೆಗೆ ಹಾಗೂ ಸಂಜೆ 5.30ರಿಂದ 7.30ರ ನಡುವೆ ರೈಲಿನ ಮೊದಲ ಎರಡು ಬಾಗಿಲುಗಳನ್ನು ಮಹಿಳೆಯರು ಮಾತ್ರ ಬಳಸಬಹುದು. ನಾಳೆಯಿಂದಲೆ ಪ್ರಾಯೋಗಿಕವಾಗಿ ಜಾರಿಗೊಳಿಸಲಿದ್ದೇವೆ. ಇದಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದರೆ ಮಾ.1ರಿಂದ ಅಧಿಕೃತವಾಗಿ ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.

ಮಹಿಳೆಯರಿಗೆ ಮೀಸಲಿಟ್ಟಿರುವ ಬಾಗಿಲುಗಳನ್ನು ಬಳಸಲು ಪುರುಷರು ಮುಂದಾದರೆ ಭದ್ರತಾ ಸಿಬ್ಬಂದಿ ಅವರನ್ನು ತಡೆದು, ಮಹಿಳೆಯರಿಗೆ ಮೀಸಲು ಇರುವ ಕುರಿತು ಮಾಹಿತಿ ನೀಡಲಿದ್ದಾರೆ. ನಿಯಮ ಉಲ್ಲಂಘಿಸುವವರಿಗೆ ಸದ್ಯಕ್ಕಂತೂ ನಾವು ದಂಡ ವಿಧಿಸುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.

ಜನಜಂಗುಳಿ ಹೆಚ್ಚು ಇದ್ದಾಗ ನೂಕುನುಗ್ಗಲು ಸಾಮಾನ್ಯ. ಇದರಿಂದ ಮಹಿಳಾ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಹೀಗಾಗಿ ಪ್ರತ್ಯೇಕ ಎರಡು ಬಾಗಿಲುಗಳನ್ನು ಮೀಸಲಿರಿಸಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News