ಫೆಡರರ್ ಫೈನಲ್‌ಗೆ: ಡಿಮಿಟ್ರೊವ್ ಎದುರಾಳಿ

Update: 2018-02-18 18:37 GMT

ರೋಟರ್‌ಡಮ್, ಫೆ.18: ವಿಶ್ವದ ನಂ. ಆಟಗಾರ ರೋಜರ್ ಫೆಡರರ್ ರೋಟರ್‌ಡಮ್ ಟೆನಿಸ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಗಿದ್ದು, ಮುಂದಿನ ಸುತ್ತಿನಲ್ಲಿ ಗ್ರಿಗೊರ್ ಡಿಮಿಟ್ರೊವ್‌ರನ್ನು ಎದುರಿಸಲಿದ್ದಾರೆ.

ಶನಿವಾರವಷ್ಟೇ ವಿಶ್ವದ ನಂ.1 ಸ್ಥಾನಕ್ಕೇರಿದ ಹಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಫೆಡರರ್ ಪುರುಷರ ಸಿಂಗಲ್ಸ್ ಸೆಮಿ ಫೈನಲ್‌ನಲ್ಲಿ ಇಟಲಿಯ ಆ್ಯಂಡ್ರಿಯಸ್ ಸೆಪ್ಪಿ ಅವರನ್ನು 6-3, 7-6(7/3) ಸೆಟ್‌ಗಳಿಂದ ಮಣಿಸಿದ್ದಾರೆ.

36ರ ಹರೆಯದ ಫೆಡರರ್ ಸೆಪ್ಪಿ ವಿರುದ್ಧ ಆಡಿರುವ 15 ಪಂದ್ಯಗಳಲ್ಲಿ 14ನೇ ಜಯ ದಾಖಲಿಸಿದರು.

ದ್ವಿತೀಯ ಶ್ರೇಯಾಂಕದ ಡಿಮಿಟ್ರೊವ್ ಸೆಮಿ ಫೈನಲ್‌ನಲ್ಲಿ ಎದುರಾಳಿ ಬೆಲ್ಜಿಯಂನ ಡೇವಿಡ್ ಗಫಿನ್ ಕಣ್ಣುನೋವಿನಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಫೈನಲ್‌ಗೆ ಪ್ರವೇಶಿಸಿದರು. ಡಿಮಿಟ್ರೊವ್ 6-3, 0-1 ಮುನ್ನಡೆಯಲ್ಲಿದ್ದಾಗ ಗಫಿನ್‌ಗೆ ಚೆಂಡು ಕಣ್ಣಿಗೆ ತಾಗಿ ನೋವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News