ಮೂರನೇ ಸ್ಥಾನಕ್ಕೆ ಕುಸಿದ ಮಿಥಾಲಿ ರಾಜ್

Update: 2018-02-18 18:49 GMT

ಹೊಸದಿಲ್ಲಿ, ಫೆ.18: ದಕ್ಷಿಣ ಆಫ್ರಿಕ ವಿರುದ್ಧ ಸಾಧಾರಣ ಪ್ರದರ್ಶನ ನೀಡಿರುವ ಮಿಥಾಲಿ ರಾಜ್ ಐಸಿಸಿ ಮಹಿಳೆಯರ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯದ ಎಲ್ಲಿಸ್ ಪೆರ್ರಿ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದಾರೆ.

ಮಹಿಳೆಯರ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಔಟಾಗದೆ 213 ರನ್ ಗಳಿಸಿದ್ದ ಪೆರ್ರಿ ಏಕದಿನ ಸರಣಿಯ 3 ಪಂದ್ಯಗಳಲ್ಲಿ 110 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯದ ನಾಯಕಿ ಮೆಗ್ ಲ್ಯಾನ್ನಿಂಗ್ ಎರಡನೇ ಸ್ಥಾನಕ್ಕೆ ಭಡ್ತಿ ಪಡೆದರೆ, ಭಾರತದ ಹಿರಿಯ ಆಟಗಾರ್ತಿ ಮಿಥಾಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಲಗೈ ಆಟಗಾರ್ತಿ ಮಿಥಾಲಿ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ 45,20,4 ರನ್ ಗಳಿಸಿದ್ದು, ಭಾರತ 2-1 ರಿಂದ ಸರಣಿ ಜಯಿಸಿತ್ತು.

ಭಾರತದ ಟ್ವೆಂಟಿ-20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 5ರಿಂದ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸ್ಮತಿ ಮಂಧಾನಾ 14 ಸ್ಥಾನ ಮೇಲಕ್ಕೇರಿ 21ನೇ ಸ್ಥಾನಕ್ಕೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News