ತಂತ್ರಜ್ಞರನ್ನೊಳಗೊಂಡ ನ್ಯಾಯ ಮಂಡಳಿ ರಚನೆಯಾಗಲಿ: ರವೀಂದ್ರನಾಥ್

Update: 2018-02-19 13:37 GMT

ಬೆಂಗಳೂರು, ಫೆ.19: ಅಂತರ್ ರಾಜ್ಯಗಳ ಜಲವಿವಾದವನ್ನು ಬಗೆಹರಿಸುವ ಸಲುವಾಗಿ ಸ್ಥಾಪನೆಯಾಗಿರುವ ನ್ಯಾಯಮಂಡಳಿ ತಂತ್ರಜ್ಞರನ್ನು ಒಳಗೊಂಡಂತೆ ರಚನೆಯಾಗಬೇಕು ಎಂದು ಕಾಮಗಾರಿ ಗುಣ ನಿಯಂತ್ರಣ ಕಾರ್ಯಪಡೆ ಮಾಜಿ ಸದಸ್ಯ ಕಾರ್ಯದರ್ಶಿ ಐ.ರವೀಂದ್ರನಾಥ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿವಾದದಿಂದ ಹೊರಬೀಳಲು 15 ವರ್ಷಗಳ ಕಾಲ ತೆಗೆದುಕೊಂಡಿದೆ. ನ್ಯಾಯ ಮಂಡಳಿಯಲ್ಲಿ ಸರಿಯಾದ ತಂತ್ರಜ್ಞರ ಕೊರತೆಯಿಂದಲೇಇಷ್ಟು ವಿಳಂಬವಾಗಲು ಕಾರಣವಾಗಿದೆ. ನ್ಯಾಯ ಮಂಡಳಿ ನೀಡಿರುವ ತೀರ್ಪನ್ನು ವಿಶ್ಲೇಷಿಸಿರುವ ಸುಪ್ರೀಂಕೋರ್ಟ್ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ನೀಡಿದೆ ಎಂದು ಹೇಳಿದರು.

ಕಾವೇರಿ ಜಲ ಮಂಡಳಿಯಲ್ಲಿ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿರುವ ವಕೀಲರು, ತಂತ್ರಜ್ಞರು ನೀಡುವ ಅಂಕಿ ಅಂಶಗಳನ್ನಾಧರಿಸಿ ವಾದ ಮಾಡುತ್ತಾರೆ. ಆದರೆ, ತಂತ್ರಜ್ಞರು ನೀಡುವ ಎಲ್ಲ ಅಂಕಿ ಅಂಶಗಳನ್ನು ನ್ಯಾಯಾಧೀಕರಣದ ಮುಂದೆ ಮಂಡಿಸಲು ಸಾಧ್ಯವಾಗುತ್ತಿಲ್ಲ ಎಂದ ಅವರು, ತಂತ್ರಜ್ಞಾನದ ವಿಫಲತೆ ವಾದ ಮಂಡನೆಯಲ್ಲಿ ಕಂಡುಬರುತ್ತಿದೆ. ಹೀಗಾಗಿ, ಜಲ ವಿವಾದ ನ್ಯಾಯ ಮಂಡಳಿಗಳಲ್ಲಿ ತಂತ್ರಜ್ಞರ ಲಭ್ಯತೆ ಅವಶ್ಯಕತೆ ಇದೆ ಎಂದು ತಿಳಿಸಿದರು.

ತಮಿಳುನಾಡು ಹಾಗೂ ಇನ್ನಿತರೆ ಕಣಿವೆ ರಾಜ್ಯಗಳು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಮುಂದಿನ ಹಂತದ ಕಾನೂನು ಸಮರಕ್ಕೆ ಸಿದ್ಧಗೊಳ್ಳುತ್ತಿದೆ. ಆದರೆ, ಈ ರೀತಿಯ ಕಾನೂನಿನ ಸಮರಕ್ಕೆ ಇತಿಶ್ರೀ ಹಾಡುವ ಕಾನೂನು ತಿದ್ದುಪಡಿ ನಿಯಮಗಳನ್ನು ಸಂಸತ್ತು ರಚಿಸಬೇಕು. ಅಲ್ಲಿಯವರೆಗೂ ಸುಪ್ರೀಂಕೋರ್ಟ್ ಈ ರೀತಿಯ ಅರ್ಜಿಗಳನ್ನು ಪಡೆಯದಂತೆ ಹಾಗೂ ಸುಪ್ರೀಂಕೋರ್ಟ್ ತೀರ್ಮಾನ ಕೈಗೊಳ್ಳಬೇಕು. ಅದನ್ನು ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News