ಬೆಂಗಳೂರು: ನಗದು ಮುಕ್ತ ಆರ್ಥಿಕತೆಗೆ ಫೋನ್‌ಪೇ-ಐಓಸಿಲ್ ಸಹಭಾಗಿತ್ವ

Update: 2018-02-19 15:26 GMT

ಬೆಂಗಳೂರು, ಫೆ. 19: ನಗದು ಮುಕ್ತ ಆರ್ಥಿಕತೆಗೆ ಫೋನ್‌ಪೇ ಸಂಸ್ಥೆಯು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿ.(ಐಓಸಿಎಲ್) ಸಹಭಾಗಿತ್ವದ ಒಪ್ಪಂದ ಮಾಡಿಕೊಂಡಿದ್ದು, ಪಿಓಎಸ್ ಸಾಧನವನ್ನು ಐಓಸಿಎಲ್ ರೀಟೇಲ್ ಔಟ್‌ಲೆಟ್‌ಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ.

ಸೋಮವಾರ ನಗರದಲ್ಲಿ ಮಾತನಾಡಿದ ಫೋನ್‌ಪೇ ಸಂಸ್ಥೆ ಮುಖ್ಯಸ್ಥ ಪ್ರದೀಪ್ ಡೋಡ್ಲೇ ಮಾತನಾಡಿ, ಈ ಸಹಭಾಗಿತ್ವದಿಂದ ಇಂಧನದ ಮಾರಾಟ ಕೇಂದ್ರಗಳಲ್ಲಿ ಗ್ರಾಹಕರು ಡಿಜಿಟಲ್ ಪಾವತಿಗಳನ್ನು ಅತ್ಯಂತ ತ್ವರಿತವಾಗಿ ಅಳವಡಿಸಿಕೊಳ್ಳುವಂತೆ ಮಾಡುತ್ತದೆ. ಇದರಿಂದ ದೇಶದ ಲಕ್ಷಾಂತರ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ವ್ಯವಹಾರ ಪ್ರಕ್ರಿಯೆಯನ್ನು ಗೊಂದಲ ರಹಿತ ಮತ್ತು ತ್ವರಿತವಾಗಿ ಮಾಡಲು ನಮ್ಮ ಪಿಓಎಸ್ ಸಾಧನ ಸಹಕಾರಿ. 2018ರಲ್ಲಿ ಭಾರತದಲ್ಲಿ 50 ನಗರಗಳಲ್ಲಿ ಮಿಲಿಯನ್ ಪಿಓಎಸ್ ಸಾಧನಗಳನ್ನು ಸ್ಥಾಪಿಸುವ ನಮ್ಮ ಗುರಿಯನ್ನು ನಾವು ಸಾಧಿಸುತ್ತ ಸಾಗುತ್ತಿದ್ದೇವೆ ಎಂದರು.

ಇದೇ ವೇಳೆ ಮಾತನಾಡಿದ ಐಓಸಿಎಲ್‌ನ ಸಂಜಯ್ ಸಿನ್ಹಾ, ಭಾರತದ ಅತಿದೊಡ್ಡ ಇಂಧನ ಮಾರಾಟ ಸಂಸ್ಥೆಯಾದ ಐಓಸಿಎಲ್ ತನ್ನ ಗ್ರಾಹಕರಿಗೆ ಒದಗಿಸುವ ಸೇವೆಯನ್ನು ಸದಾ ಉತ್ತಮಗೊಳಿಸುವ ಉದ್ದೇಶ ಹೊಂದಿದ್ದು, ನಮ್ಮ ಉದ್ಯಮದಲ್ಲಿ ಹೊಸಯುಗದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News