ಬೆಂಗಳೂರು: ಫೆ.20ರಿಂದ ‘ಅಂತಾರಾಷ್ಟ್ರೀಯ ಥಿಯೇಟರ್ ಒಲಿಂಪಿಕ್ಸ್’

Update: 2018-02-19 18:03 GMT

ಬೆಂಗಳೂರು, ಫೆ. 19: ರಾಷ್ಟ್ರೀಯ ನಾಟಕ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಸ್ನೇಹಧ್ವಜ ಎಂಬ ಥೀಮ್ ಕುರಿತ 8ನೆ ಅಂತಾರಾಷ್ಟ್ರೀಯ ಥಿಯೇಟರ್ ಒಲಿಂಪಿಕ್ಸ್ ಬೆಂಗಳೂರಿನಲ್ಲಿ ಫೆ.20ರಿಂದ ಮಾರ್ಚ್ 6ರ ವರೆಗೆ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ವಿವಿ ಆವರಣದಲ್ಲಿನ ಕಲಾಗ್ರಾಮದ ಸಮುಚ್ಚಯ ಭವನ ಹಾಗೂ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಜಗತ್ತಿನ ಈ ಅತಿದೊಡ್ಡ ರಂಗಭೂಮಿ ಹಬ್ಬದ ಸಹ ಅತಿಥ್ಯ ವಹಿಸಿಕೊಳ್ಳಲು ಸಡಗರದಿಂದ ಸಿದ್ಧವಾಗುತ್ತಿರುವ ಬೆಂಗಳೂರು ಎಲ್ಲರ ಕಣ್ಸೆಳೆಯಲು ತಯಾರಾಗಿದೆ. ಈ ಜಾಗತಿಕ 24ರಂಗ ಪ್ರದರ್ಶನಗಳಿಗೆ ಆತಿಥ್ಯ ವಹಿಸಿಕೊಂಡು ಜನಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಂಗ ಪ್ರಯೋಗಗಳನ್ನು ವೀಕ್ಷಿಸಲು ಒಂದು ಅವಕಾಶವಾಗಿದೆ.

ಥಿಯೇಟರ್ ಒಲಿಂಪಿಕ್ಸ್‌ನ್ನು 1993ರಲ್ಲಿ ಗ್ರೀಸ್ ದೇಶದ ಡೆಲ್ಫಿ ಎಂಬಲ್ಲಿ ಸ್ಥಾಪಿಸಲಾಯಿತು. ಅಂತಾರಾಷ್ಟ್ರೀಯ ರಂಗೋತ್ಸವವಾಗಿ ಥಿಯೇಟರ್ ಒಲಿಂಪಿಕ್ಸ್ ಜಗತ್ತಿನೆಲ್ಲೆಡೆಯಿಂದ ಹಲವಾರು ಶ್ರೇಷ್ಠ ರಂಗಕರ್ಮಿಗಳನ್ನು ಪರಿಚಯಿಸುತ್ತದೆ. ಇದು ರಂಗ ನಿಮಯಗಳಿಗೊಂದು ವೇದಿಕೆ. ಗುರು-ಶಿಷ್ಯರು ಒಟ್ಟಾಗಿ ಕಲಿತು, ಸೈದ್ಧಾಂತಿಕ, ಸಾಂಸ್ಕೃತಿಕ, ಭಾಷಾ ಭಿನ್ನತೆಗಳಿದ್ದಾಗ್ಯೂ ಸಂವಾದಕ್ಕೆ ಪ್ರೋತ್ಸಾಹ ನೀಡುವ ಸ್ಥಳ.

ಈ ಜಾಗತಿಕ ರಂಗೋತ್ಸವ ಎಂಟನೆಯ ಆವೃತ್ತಿಯ ಆತಿಥ್ಯವನ್ನು ಭಾರತದ 17 ನಗರಗಳು ವಹಿಸಲಿದ್ದು, 450 ಪ್ರದರ್ಶನಗಳು, 600 ಪ್ರದರ್ಶನಗಳು, 400 ಯುವ ವೇದಿಕೆ ಪ್ರದರ್ಶನಗಳು ನಡೆಯಲಿದ್ದು, 60 ರಂಗದಿಗ್ಗಜರೊಂದಿಗೆ ಸಂವಾದ, 60 ರಂಗತಜ್ಞರಿಂದ ಕಾರ್ಯಾಗಾರ. ಜಗತ್ತಿನಾದ್ಯಂತದಿಂದ ಬರುವ ಸುಮಾರು 25 ಸಾವಿರ ಕಲಾವಿದರು ಪಾಲ್ಗೊಳ್ಳಲಿದ್ದು, ಇದು ವಿಶ್ವದಲ್ಲೇ ಅತ್ಯಂತ ವೈಭವದ ಸಾಂಸ್ಕೃತಿಕ ರಂಗ ಸಂಭ್ರಮವನ್ನಾಗಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News