ಮಕ್ಕಳಿಗೆ ಕಲಿಕೆ ಸಾಮರ್ಥ್ಯ ಹೆಚ್ಚು: ಮಂಜುಳಾ

Update: 2018-02-19 18:09 GMT

ಬೆಂಗಳೂರು, ಫೆ. 19: ಐದು ವರ್ಷದೊಳಗಿನ ಮಕ್ಕಳಿಗೆ ಕಲಿಯುವ ಮತ್ತು ಹೊಸದನ್ನು ಅಳವಡಿಸಿಕೊಳ್ಳುವ ಅಪಾರ ಸಾಮರ್ಥ್ಯವಿರುತ್ತದೆ. ಹೀಗಾಗಿ ಅವರಿಗೆ ಕಲಿಕೆಯ ವಾತಾವರಣವು ಆವಿಷ್ಕಾರಕ ಮತ್ತು ಬಹು ಆಯಾಮದಾಗಿರಬೇಕು ಎಂದು ಶಿಕ್ಷಣ ತಜ್ಞೆ ಮಂಜುಳಾ ರಾಮನ್ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ನಗರದಲ್ಲಿ ಮಾತನಾಡಿದ ಅವರು, ಲಿಟ್ಲ್ ಬಡ್ಡಿ ಕಿಂಡರ್ ಗಾರ್ಟನ್ ಮಗುವಿನ ಕುತೂಹಲ ಮತ್ತು ಆಸಕ್ತಿಯನ್ನು ಅನುಭವಪೂರ್ವಕ ಮತ್ತು ವಿಚಾರಣೆ ಆಧರಿತ ಕಲಿಕೆಯಾಗಿಸುವ ವಿಶೇಷ ಪಠ್ಯಕ್ರಮ ಮತ್ತು ಬೋಧನೆಯ ಮಾದರಿ ಎಂದು ಹೇಳಿದರು.

ಇದರಿಂದ ಮಕ್ಕಳಿಗೆ ಹೆಚ್ಚು ಸಾಮರ್ಥ್ಯದೊಂದಿಗೆ ಬೆಳೆಯಲು, ಸ್ವತಂತ್ರ ಆಲೋಚನೆ ಬೆಳೆಸಿಕೊಳ್ಳಲು ಮತ್ತು ಅವರಿಗೆ ಸ್ವಂತ ಜವಾಬ್ದಾರಿ ತೆಗೆದುಕೊಳ್ಳಲು ನೆರವಾಗುತ್ತದೆ ಎಂದ ಅವರು, ಸೃಜನಶೀಲ, ಕಲ್ಪನಾತ್ಮಕ, ದೈಹಿಕ, ರಚನಾತ್ಮಕ ಆಟಗಳಿಗೆ ಮತ್ತು ಗಣಿತಶಾಸ್ತ್ರ ಕಲಿಕೆಗೆ ಸಹಕಾರಿ ಎಂದು ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News