ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಭಾರತೀಯ ಡೇವಿಡ್ ಮೃತದೇಹವನ್ನು ತವರಿಗೆ ತಲುಪಿಸಲು ಶ್ರಮಿಸಿದ ಐ.ಎಸ್.ಎಫ್

Update: 2018-02-19 18:48 GMT

ಸೌದಿ ಅರೇಬಿಯಾ,ಫೆ.19 ಅಭಾ ಅಸೀರ್ ಪ್ರಾಂತ್ಯದ ಅಲ್-ನಮಾಸ್ ಎಂಬಲ್ಲಿ ಸುಮಾರು 15 ವರ್ಷಗಳಿಂದ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಡೇವಿಡ್ ಝಂಬೆರಿ, ಜ.28 ರಂದು ಊರಿಗೆ ಹೋಗುವ ಸಲುವಾಗಿ ಟಿಕೇಟ್ ಬುಕ್ ಮಾಡಿದ್ದರು. ಆದರೆ ಜ.28 ರ ಮುಂಜಾನೆ ಅನಾರೋಗ್ಯದ ಕಾರಣ ಅಲ್-ನಮಾಸ್ ಜನರಲ್ ಹಾಸ್ಪಿಟಲ್ ಗೆ ಇವರನ್ನು ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ.

ಡೇವಿಡ್ ಝಂಬೆರಿ ರವರ ಅಳಿಯ ಸೊಶಿಯಲ್ ಪಾರಂ ಕಮೀಸ್ ಮುಶೈತ್ ಘಟಕದ ಅಧ್ಯಕ್ಷರು ಮತ್ತು ಜಿದ್ದಾ ಕೌನ್ಸಲಿಟಿಯ ಸಿ.ಡಬ್ಲ್ಯು ಸದಸ್ಯರಾದ ಹನೀಫ್ ಮಂಜೇಶ್ವರ ಅವರನ್ನು ಸಂಪರ್ಕಿಸಿ ನೆರವಿಗಾಗಿ ಮನವಿ ಮಾಡಿದ್ದರು. ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಶೈತ್ ಘಟಕದ ಕಾರ್ಯದರ್ಶಿ ಅಸಿರ್ ಕುಂಜದಕಟ್ಟೆ, ಇಬ್ರಾಹಿಂ ದೇರಳಕಟ್ಟೆ, ನೂರುದ್ದೀನ್ ಆವಿನಹಳ್ಳಿ, ಮನ್ಸೂರ್, ತಂಡವು ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಪೋಲಿಸ್ ಠಾಣೆ ಮತ್ತು ಅವರ ಕಫೀಲ್ (ವೀಸಾ ಪ್ರಾಯೋಜಕ)ನ್ನು ಭೇಟಿಯಾಗಿ, ದಾಖಲೆಗಳನ್ನು ಸರಿಪಡಿಸಿ ವ್ಯವಸ್ಥಿತಗೊಳಿಸಿದರು.

ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಶೈತ್ ಘಟಕದ ನೆರವಿನಿಂದ ಡೇವಿಡ್ ಝಂಬೆರಿರವರ ಮೃತದೇಹವನ್ನು ಫೆ.18ರಂದು ಅಭಾ ವಿಮಾನ ನಿಲ್ದಾಣದಿಂದ ಮುಂಬೈ ಮಲಾಡ್ ವಿಮಾನ ನಿಲ್ದಾಣದ ಮೂಲಕ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು. ಇಂಡಿಯನ್ ಸೋಶಿಯಲ್ ಫೋರಂನ ನೆರವಿಗೆ ಮೃತರ ಪತ್ನಿ ಹಾಗೂ ಸಂಬಂಧಿಕರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News