ಆಸ್ಟ್ರೇಲಿಯದ ಹಿರಿಯ ಆಟಗಾರ್ತಿ ಅಲೆಕ್ಸ್ ಬ್ಲಾಕ್ ವೆಲ್ ನಿವೃತ್ತಿ

Update: 2018-02-19 18:45 GMT

ಮೆಲ್ಬೋರ್ನ್, ಫೆ.19: ಆಸ್ಟ್ರೇಲಿಯದ ಪರ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಕ್ರಿಕೆಟ್ ಆಟಗಾರ್ತಿ ಅಲೆಕ್ಸ್ ಬ್ಲಾಕ್‌ವೆಲ್ ಸೋಮವಾರ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

ಬ್ಲಾಕ್‌ವೆಲ್ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 251 ಪಂದ್ಯಗಳನ್ನು ಆಡಿದ್ದಾರೆ. ಬ್ಲಾಕ್‌ವೆಲ್ ತನ್ನ ಸುಮಾರು 10 ವರ್ಷಗಳ ವೃತ್ತಿಜೀವನದಲ್ಲಿ ಆಸ್ಟ್ರೇಲಿಯದ ಪರ 144 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 3,492 ರನ್ ಗಳಿಸಿದ್ದು, 114 ವೈಯಕ್ತಿಕ ಗರಿಷ್ಠ ಸ್ಕೋರಾಗಿದೆ.

ಟ್ವೆಂಟಿ-20 ಕ್ರಿಕೆಟ್‌ನಲ್ಲಿ 95 ಪಂದ್ಯಗಳನ್ನು ಆಡಿರುವ ಬ್ಲಾಕ್‌ವೆಲ್ 1,314 ರನ್ ಗಳಿಸಿದ್ದು, ಗರಿಷ್ಠ 61 ರನ್ ಗಳಿಸಿದ್ದಾರೆ. 12 ಟೆಸ್ಟ್ ಪಂದ್ಯಗಳನ್ನು ಆಡಿರುವ ಬ್ಲಾಕ್‌ವೆಲ್ 200ಕ್ಕೂ ಅಧಿಕ ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯದ ಮೊದಲ ಆಟಗಾರ್ತಿಯಾಗಿದ್ದಾರೆ. 2010ರಲ್ಲಿ ಆಸ್ಟ್ರೇಲಿಯ ತಂಡ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಗೆದ್ದಾಗ ಬ್ಲಾಕ್‌ವೆಲ್ ತಂಡದ ನಾಯಕಿಯಾಗಿದ್ದರು. ವಿಶ್ವಕಪ್‌ನಲ್ಲಿ ಆಸೀಸ್ ಪರ ಗರಿಷ್ಠ ರನ್ ಗಳಿಸಿದ್ದ ಅವರು ಟೂರ್ನಿಯ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರು. 34ರ ಹರೆಯದ ಬ್ಲಾಕ್‌ವೆಲ್ ಬಿಗ್ ಬ್ಯಾಶ್ ಲೀಗ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News