ಸ್ವಾಗತಾರ್ಹ ಯೋಜನೆ

Update: 2018-02-21 18:44 GMT

ಮಾನ್ಯರೇ,

 ಆನೆಗಳು ರೈಲಿನಡಿಗೆ ಸಿಲುಕಿ ಸಾವನ್ನಪ್ಪುವ ಪ್ರಕರಣಗಳನ್ನು ಇತ್ತೀಚೆಗೆ ಪದೇಪದೇ ಕಾಣುತ್ತಿದ್ದೇವೆ. ಇದನ್ನು ತಪ್ಪಿಸಲು ಕೀಟಗಳ ಮುದ್ರಿತ ಧ್ವನಿ ಇರುವ ಸಾಧನ ಬಳಸಲು ಈಶಾನ್ಯ ಗಡಿ ರೈಲ್ವೆ ನಿರ್ಧರಿಸಿರುವುದು ಉತ್ತಮ ಯೋಜನೆ. ಈಶಾನ್ಯ ಗಡಿ ರೈಲ್ವೆಯು ಲೆವೆಲ್ ಕ್ರಾಸಿಂಗ್‌ಗಳು ಮತ್ತು ಇತರ ಪ್ರಮುಖ ತಿರುವುಗಳಲ್ಲಿ ಈ ಸಾಧನಗಳನ್ನು ಬಳಸಲು ನಿರ್ಧರಿಸಿದೆ. ಹಾಗೂ ಈ ಧ್ವನಿಯು ಸುಮಾರು 600 ಮೀಟರ್ ದೂರದವರೆಗೆ ಕೇಳಿಸುತ್ತದೆಯಂತೆ. ಧ್ವನಿ ಕೇಳಿ ಹೆದರುವ ಆನೆಗಳು ತಮ್ಮ ದಾರಿ ಬದಲಿಸಿ ಕೊಳ್ಳುತ್ತವೆ. ಈ ಯೋಜನೆಯನ್ನು ಅಸ್ಸಾಂನ ರಂಗಿಯಾದಲ್ಲಿ ಜಾರಿಗೆ ತಂದಿದ್ದು ಅಲ್ಲಿ ಯಶಸ್ವಿಯಾಗಿದೆ. ಇಂತಹ ಯೋಜನೆಯನ್ನು ಜಾರಿಗೆ ತರುವ ಮೂಲಕ ಆನೆಗಳು ರೈಲಿಗೆ ಸಿಲುಕಿ ಸಾವನ್ನಪ್ಪುತ್ತಿರುವ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಮುಂದಿನ ದಿನಗಳಲ್ಲಿ ಈ ಯೋಜನೆಯು ಆನೆಗಳ ಸಾವನ್ನು ತಪ್ಪಿಸುವಲ್ಲಿ ಹೆಚ್ಚು ಉಪಯೋಗವಾಗಲಿದೆ.

Writer - -ಹರ್ಷಿತ ಎಲ್.ಎಂ ಲಕ್ಕವಳ್ಳಿ

contributor

Editor - -ಹರ್ಷಿತ ಎಲ್.ಎಂ ಲಕ್ಕವಳ್ಳಿ

contributor

Similar News