×
Ad

ಹೈ-ಕರ್ನಾಟಕ ಪ್ರದೇಶದಲ್ಲಿ 1,22,291 ಹುದ್ದೆಗಳ ಭರ್ತಿ : ಕೃಷ್ಣಭೈರೇಗೌಡ

Update: 2018-02-22 20:17 IST

ಬೆಂಗಳೂರು, ಫೆ.22: ಹೈದ್ರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳು ಹಾಗೂ ಹರಪ್ಪನಹಳ್ಳಿ ತಾಲೂಕಿನಲ್ಲಿ 1,68,742 ಹುದ್ದೆಗಳು ಮಂಜೂರಾಗಿದ್ದು, ಈಗಾಗಲೇ 1,22,291 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಗುರುವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಅಮರನಾಥ್ ಪಾಟೀಲ್ ಅವರು ಹೈಕ ಭಾಗದಲ್ಲಿ ಎಷ್ಟು ಹುದ್ದೆಗಳನ್ನು ತುಂಬಲಾಗಿದೆಯೆಂದು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅವರ ಬದಲಾಗಿ ಉತ್ತರಿಸಿದ ಸಚಿವರು, ಹೈಕ ಭಾಗದ 6 ಜಿಲ್ಲೆಗಳು ಹಾಗೂ ಹರಪ್ಪನಹಳ್ಳಿ ತಾಲೂಕಿನಲ್ಲಿ ಖಾಲಿ ಇರುವ ಹುದ್ದೆಗಳನ್ನು ಅಗತ್ಯತೆಗನುಸಾರವಾಗಿ ತುಂಬುತ್ತಿದ್ದು, ಈಗಾಗಲೇ 1,22,291 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಖಾಲಿ ಇರುವ 46,451 ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಹರಪ್ಪನಹಳ್ಳಿ ತಾಲೂಕು ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿದ್ದು, ಹೈಕ ಪ್ರದೇಶದ ವ್ಯಾಪ್ತಿಯ ಹೊರಗಿರುವುದರಿಂದಾಗಿ ಅನುಚ್ಛೇದ 371ಜೆ ನಂತೆ ಮೀಸಲಾತಿ ಅನ್ವಯಿಸುವುದಿಲ್ಲ. ಆದರೆ, ಹೈಕ ಪ್ರದೇಶದ 6 ಜಿಲ್ಲೆಗಳಲ್ಲಿ 371ಜೆ ನಂತೆ ಹುದ್ದೆಗಳನ್ನು ಗುರುತಿಸಿ, ಭರ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News