ಪಾಪ್ಯುಲರ್ ಫ್ರಂಟ್ ನಿಷೇಧ ತೀರ್ಮಾನ: ತೀವ್ರ ಖಂಡನೆ

Update: 2018-02-22 18:07 GMT

ಬೆಂಗಳೂರು, ಫೆ.22: ಜಾರ್ಖಂಡ್ ಸರಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆ ಮೇಲೆ ನಿಷೇಧ ಹೇರುವ ತೀರ್ಮಾನ ಪೂರ್ವಾಗ್ರಹಪೀಡಿತವಾಗಿದೆ ಎಂದು ಪಿಎಫ್‌ಐ ಕೇಂದ್ರ ಸಮಿತಿ ಆರೋಪಿಸಿದೆ.

ಪಿಎಫ್‌ಐ ಸಂಘಟನೆ ಕಾರ್ಯಕರ್ತರು ನಿಷೇಧಕ್ಕೆ ಒಳಪಟ್ಟಿರುವ ಐಎಸ್‌ಎಸ್ ಸಂಘಟನೆಯಿಂದ ಪ್ರಭಾವಿತರಾಗಿದ್ದಾರೆ ಎಂದು ಜಾರ್ಖಂಡ್ ಸಿಎಂ ಕಾರಣ ನೀಡಿದ್ದಾರೆ. ಈ ಕುರಿತು ಜಾರ್ಖಂಡ್ ಸರಕಾರ ಕೆಲವು ದೃಢೀಕರಿಸಿದ ವರದಿಗಳನ್ನು ಉಲ್ಲೇಖಿಸಿರುವುದು ಅಚ್ಚರಿದಾಯಕವಾಗಿದ್ದು, ಇದೆಲ್ಲ ಪೂರ್ವಗ್ರಹ ಪೀಡಿತವಾಗಿದೆ.

ಹಿಂದುತ್ವ ಆಡಳಿತದ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಸಂಘಟನೆ ಮೇಲೆ ಈ ರೀತಿಯ ದ್ವೇಷ ಸಾಧನೆ ಮಾಡಲು ಮುಂದಾಗಿರುವುದು ತೀವ್ರ ಖಂಡನೀಯ. ಈ ರಾಜ್ಯದಲ್ಲಿ ದಮನಿತ ವರ್ಗಗಳ ಚಳವಳಿಯನ್ನು ಹತ್ತಿಕ್ಕಲು ಈ ರೀತಿಯ ಅವೈಜ್ಞಾನಿಕವಾದ ನಿರ್ಣಯ ಕೈಗೊಳ್ಳಲು ಮುಂದಾಗಿದ್ದಾರೆ. ಇದು ಸಂವಿಧಾನ ವಿರೋಧಿಯಾಗಿದ್ದು, ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಸಮಿತಿ ಆಗ್ರಹಿಸಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ 2015ರಿಂದ ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ಕಾರ್ಯಾಚರಿಸುತ್ತಿದೆ. ರಾಜ್ಯದಲ್ಲಿ ನಡೆಯುವ ಹಲವಾರು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿದೆ. ನ್ಯಾಯಯುತವಾದ ಹೋರಾಟ ಮಾಡಿಕೊಂಡು ಬರುತ್ತಿದೆ. ಹೀಗಿದ್ದರೂ, ಸಂಘಟನೆ ಮೇಲೆ ಅನಗತ್ಯ ಆರೋಪ ಹೊರಿಸಿರುವುದು ಸರಿಯಾದ ಕ್ರಮವಲ್ಲ. ಆದುದರಿಂದ ಕೂಡಲೇ ರಾಜ್ಯ ಸರಕಾರ ಅದನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ದೇಶದಾದ್ಯಂತ ತೀವ್ರ ಹೋರಾಟ ಮಾಡಲಾಗುತ್ತದೆ ಎಂದು ಪಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News