ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಹಾಕಿ ತಂಡಕ್ಕೆ ಯಶಸ್ಸು ಸಿಗಲಿದೆ: ಮನ್‌ಪ್ರೀತ್ ಸಿಂಗ್

Update: 2018-02-22 18:49 GMT

ಹೊಸದಿಲ್ಲಿ, ಫೆ.22: ‘‘2018ರಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ನಮ್ಮ ಮುಂದೆ ಭಾರೀ ಸವಾಲಿದೆ. ಭಾರತೀಯ ಹಾಕಿ ತಂಡ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಹಾಕಿ ವಿಶ್ವಕಪ್‌ನಲ್ಲಿ ಜಯ ಸಾಧಿಸುವ ವಿಶ್ವಾಸವಿದೆ’’ ಎಂದು ಕಳೆದ ವರ್ಷ ಭಾರತ ಏಷ್ಯಾಕಪ್ ಪ್ರಶಸ್ತಿ ಜಯಿಸಲು ತಂಡದ ನಾಯಕತ್ವವಹಿಸಿದ್ದ ಮನ್‌ಪ್ರೀತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

  ನವೆಂಬರ್-ಡಿಸೆಂಬರ್‌ನಲ್ಲಿ ಭುವನೇಶ್ವರದಲ್ಲಿ ಎಫ್‌ಐಎಚ್ ವಿಶ್ವಕಪ್‌ನ್ನು ಆಡಲಿರುವ ಭಾರತ ತಂಡ ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್‌ಗಳಲ್ಲೂ ಸ್ಪರ್ಧಿಸಲಿದೆ. ‘‘2020ರ ಒಲಿಂಪಿಕ್ಸ್ ಗೇಮ್ಸ್ ಹಿನ್ನೆಲೆಯಲ್ಲಿ ಈ ವರ್ಷ ನಮಗೆ ಅತ್ಯಂತ ಮುಖ್ಯ. ಮಾತ್ರವಲ್ಲ ನಿರ್ಣಾಯಕ ಕೂಡ ಹೌದು. ನಾವು ಈ ವರ್ಷದ ಎಪ್ರಿಲ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್, ಆಗಸ್ಟ್‌ನಲ್ಲಿ ಏಷ್ಯನ್ ಗೇಮ್ಸ್ ಹಾಗೂ ನವೆಂಬರ್‌ನಲ್ಲಿ ವಿಶ್ವಕಪ್‌ನ್ನು ಆಡಲಿದ್ದೇವೆ. ನಮ್ಮ ತಂಡ ಹೆಚ್ಚು ಪದಕಗಳನ್ನು ಜಯಿಸಿದರೆ ನಮ್ಮ ಆತ್ಮವಿಶ್ವಾಸ ಇಮ್ಮಡಿಯಾಗಲಿದೆ. ಟೂರ್ನಮೆಂಟ್‌ಗಳಲ್ಲಿ ತಂಡವನ್ನು ರೊಟೇಟ್ ಮಾಡುವ ಕಾರಣ ಯುವ ಆಟಗಾರರಿಗೆ ಹೆಚ್ಚು ಅವಕಾಶ ಸಿಗಲಿದೆ. ಯುವಕರಿಗೆ ಹಿರಿಯ ಆಟಗಾರರೊಂದಿಗೆ ಆಡುವ ಅವಕಾಶ ಸಿಗಲಿದೆ’’ ಎಂದು 25ರ ಹರೆಯದ ಮನ್‌ಪ್ರೀತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News