×
Ad

ಬಾಡಿಗೆ ಕಟ್ಟಡದಲ್ಲಿರುವ 132 ಗ್ರಾಪಂಗಳಿಗೆ ಮಾ.31ರೊಳಗೆ ನಿವೇಶನ ಒದಗಿಸಲು ಸೂಚನೆ: ಎಚ್.ಕೆ.ಪಾಟೀಲ್

Update: 2018-02-23 18:28 IST

ಬೆಂಗಳೂರು, ಫೆ.23: ರಾಜ್ಯದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ 132 ಗ್ರಾಮ ಪಂಚಾಯತ್ ಗಳಿಗೆ ಮಾ.31ರೊಳಗೆ ನಿವೇಶನ ಒದಗಿಸುವಂತೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೂತನವಾಗಿ 462 ಗ್ರಾಮ ಪಂಚಾಯತ್ ಗಳು ಮಂಜೂರಾಗಿದ್ದು, ಬಾಡಿಗೆ ಕಟ್ಟಡಗಳಲ್ಲಿ 151 ಗ್ರಾಮ ಪಂಚಾಯತ್ ಗಳು ಕಾರ್ಯನಿರ್ವಹಿಸುತ್ತಿವೆ. 293 ಕಡೆ ಇತರೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 18 ಗ್ರಾಮ ಪಂಚಾಯತ್ ಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 132 ಗ್ರಾ.ಪಂ.ಗಳಿಗೆ ನಿವೇಶನ ಒದಗಿಸಲು ಸಾಧ್ಯವಿದ್ದು, ಮಾ.31ರೊಳಗೆ ಒದಗಿಸಬೇಕೆಂದು ಸೂಚಿಸಲಾಗಿದೆ. ಸ್ಥಳವೂ ಮಂಜೂರಾತಿಯಾಗಿದ್ದು, ನ್ಯಾಯಾಲಯದ ಪ್ರಕರಣಗಳಿಂದ ಕಟ್ಟಡ ರಚನೆಗೆ ಹಲವೆಡೆ ತಡೆ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News