×
Ad

ಬೆಂಗಳೂರು: ವ್ಯಕ್ತಿಯ ಕೊಲೆ

Update: 2018-02-23 18:39 IST

ಬೆಂಗಳೂರು, ಫೆ.23: ವ್ಯಕ್ತಿಯೊಬ್ಬನನ್ನು ಕೊಲೆಗೈದಿರುವ ದುರ್ಘಟನೆ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುರುಬರಹಳ್ಳಿ ಜೆಸಿನಗರದ ನಿವಾಸಿ ನರಸಿಂಹಮೂರ್ತಿ(35) ಕೊಲೆಯಾದ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದಾರೆ.

ಕುರುಬರಹಳ್ಳಿಯ ವೃತ್ತದಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ನರಸಿಂಹಮೂರ್ತಿ, ಮೂಲತಃ ರಾಮನಗರದವರು. ಏಳು ವರ್ಷದ ಹಿಂದೆ ಮಾಗಡಿ ಮೂಲದ ಅನಿತಾ ಎಂಬುವರನ್ನು ವಿವಾಹವಾಗಿದ್ದು, ಕುರುಬಹಳ್ಳಿಯ ಜೆಸಿ ನಗರದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಸಂಜೆ ಎಂದಿನಂತೆ ಪಾನಿಪುರಿ ವ್ಯಾಪಾರ ಮುಗಿಸಿಕೊಂಡು ನರಸಿಂಹಮೂರ್ತಿ ಮನೆಗೆ ಬಂದಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ನರಸಿಂಹಮೂರ್ತಿ ಅವರ ಮೇಲೆ ಹಲ್ಲೆ ನಡೆಸಿ ಮಾರಕಾಸ್ತ್ರಗಳಿಂದ ಇರಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News