ಬೆಂಗಳೂರು: ‘ಸರಳ-ಸಜ್ಜನ ಯು.ಟಿ.ಖಾದರ್’ ಕೃತಿ ಬಿಡುಗಡೆ
Update: 2018-02-23 19:56 IST
ಬೆಂಗಳೂರು, ಫೆ.23: ಆಹಾರ ಮತ್ತು ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಆಡಳಿತದ ವೈಖರಿ ಹಾಗೂ ಸಾಮಾಜಿಕ ಕಳಕಳಿಯನ್ನು ಒಳಗೊಂಡ ಪುಸ್ತಕವನ್ನು ಯು.ಟಿ.ಖಾದರ್ ಅಭಿಮಾನಿಗಳ ಬಳಗ ಹೊರ ತಂದಿದೆ.
ನಗರದ ಮಲ್ಲೇಶ್ವರ್‌ನಲ್ಲಿರುವ ಸಚಿವ ಖಾದರ್ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸರಳ-ಸಜ್ಜನ ಯು.ಟಿ.ಖಾದರ್’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಸಚಿವ ಖಾದರ್, ನನ್ನ ಹೆಸರಿನಲ್ಲಿ ಅಭಿಮಾನಿ ಬಳಗ ಕಟ್ಟಿಕೊಂಡು, ಸಾಮಾಜಿಕ ಕಾರ್ಯಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಬಳಗದಿಂದ ಮತ್ತಷ್ಟು ಸಮಾಜ ಪರವಾದ ಕೆಲಸಗಳು ನಡೆಯಲಿ ಎಂದು ಆಶಿಸಿದರು.
ಈ ವೇಳೆ ಯು.ಟಿ.ಖಾದರ್ ಅಭಿಮಾನಿ ಬಳಗದ ಅಧ್ಯಕ್ಷ ಅಶ್ರಫ್, ಪ್ರಧಾನ ಕಾರ್ಯದರ್ಶಿ ದಾವೂದ್, ಸಹಕಾರ್ಯದರ್ಶಿ ಯಾಕೂಬ್, ಉಪಾಧ್ಯಕ್ಷ ನಿಸಾರ್ ಮತ್ತಿತರರಿದ್ದರು.