ತುರ್ಕ್‌ಮೆನಿಸ್ತಾನ-ಪಾಕ್-ಭಾರತ-ಅಫ್ಘಾನ್ ಅನಿಲ ಪೈಪ್‌ಲೈನ್ ಆರಂಭ

Update: 2018-02-23 18:08 GMT

ಅಶ್ಗಾಬತ್ (ತುರ್ಕ್‌ಮೆನಿಸ್ತಾನ), ಫೆ. 23: ಭಾರತ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನವನ್ನು ತುರ್ಕ್‌ಮೆನಿಸ್ತಾನಕ್ಕೆ ಸಂಪರ್ಕಿಸುವ 8 ಬಿಲಿಯ ಡಾಲರ್ (ಸುಮಾರು 51,896 ಕೋಟಿ ರೂಪಾಯಿ) ವೆಚ್ಚದ ನೈಸರ್ಗಿಕ ಅನಿಲ ಪೈಪ್‌ಲೈನ್‌ನ ಅಫ್ಘಾನಿಸ್ತಾನ ಭಾಗದ ನಿರ್ಮಾಣ ಕಾರ್ಯ ಆರಂಭಗೊಂಡಿದೆ ಎಂದು ತುರ್ಕ್‌ಮೆನಿಸ್ತಾನ ಶುಕ್ರವಾರ ಘೋಷಿಸಿದೆ.

  ಸೋವಿಯತ್ ಯೂನಿಯನ್‌ನ ಘಟಕವಾಗಿದ್ದ ತುರ್ಕ್‌ಮೆನಿಸ್ತಾನವು ನೈಸರ್ಗಿಕ ಅನಿಲ ಲಭ್ಯತೆಯಲ್ಲಿ ಜಗತ್ತಿನ ನಾಲ್ಕನೆ ಸ್ಥಾನದಲ್ಲಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ರಶ್ಯವು ಅನಿಲ ಆಮದು ಪ್ರಮಾಣವನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ರಫ್ತಿಗಾಗಿ ಚೀನಾವನ್ನೇ ಅವಲಂಬಿಸಿತ್ತು.

‘‘ಟಿಎಪಿಐ (ತುರ್ಕ್‌ಮೆನಿಸ್ತಾನ-ಅಫ್ಘಾನಿಸ್ತಾನ-ಪಾಕಿಸ್ತಾನ-ಭಾರತ) ಪೈಪ್‌ಲೈನ್‌ಗೆ ಜಗತ್ತಿನ ಎರಡನೆ ಅತಿ ದೊಡ್ಡ ಅನಿಲ ನಿಕ್ಷೇಪ ‘ಗಾಲ್ಕಿನ್ಶ್’ನಿಂದ ಅನಿಲ ಪೂರೈಸಲಾಗುವುದು’’ ಎಂದು ತುರ್ಕ್‌ಮೆನಿಸ್ತಾನ ಅಧ್ಯಕ್ಷ ಕುರ್ಬಂಗುಲಿ ಬರ್ಡಿಮುಖಮೆಡೊವ್ ವೀಡಿಯೊ ಲಿಂಕ್ ಮೂಲಕ ಸುದ್ದಿಗಾರರಿಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News