ನೀವು ಟೊಮೆಟೊ ತಿನ್ನಲೇಬೇಕು ಎನ್ನುವುದಕ್ಕೆ 10 ಕಾರಣಗಳಿಲ್ಲಿವೆ

Update: 2018-02-26 10:56 GMT

ಅಡುಗೆಮನೆಗಳಲ್ಲಿ ಮಾಮೂಲು ವಸ್ತುವಾಗಿರುವ ಟೊಮೆಟೊ ಅದ್ಭುತ ಆರೋಗ್ಯಲಾಭಗಳನ್ನು ನೀಡುತ್ತದೆ. ಪೊಟ್ಯಾಷಿಯಂ, ಮ್ಯಾಂಗನೀಸ್, ಮ್ಯಾಗ್ನೀಷಿಯಂ, ರಂಜಕ ಮತ್ತು ತಾಮ್ರದ ಉತ್ತಮ ಮೂಲವಾಗಿರುವ ಜೊತೆಗೆ ಅದು ಸಾಕಷ್ಟು ನಾರು, ಪ್ರೋಟಿನ್ ಮತ್ತು ಲೈಕೊಪೀನ್‌ನಂತಹ ಹಲವಾರು ಆರ್ಗಾನಿಕ್ ಸಂಯುಕ್ತಗಳನ್ನು ಒಳಗೊಂಡಿದೆ.

► ಟೊಮೆಟೊ ಸಮೃದ್ಧ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಅದರಲ್ಲಿ ಹೇರಳವಾಗಿರುವ ಲೈಕೊಪೀನ್ ಕ್ಯಾನ್ಸರ್‌ಗೆ ಕಾರಣವಾಗುವ ಫ್ರೀ ರ್ಯಾಡಿಕಲ್‌ಗಳನ್ನು ನಿವಾರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.

► ಅದು ವಿಟಾಮಿನ್‌ಗಳು ಮತ್ತು ಖನಿಜಗಳ ಆಗರವಾಗಿದೆ. ಒಂದು ಟೊಮೆಟೊ ಸೇವನೆಯಿಂದ ನಮ್ಮ ದೈನಂದಿನ ವಿಟಾಮಿನ್ ಸಿ ಅಗತ್ಯದ ಶೇ.40 ರಷ್ಟನ್ನು ಪಡೆಯಬಹುದು.

► ಟೊಮೆಟೊ ಹೃದಯವನ್ನು ರಕ್ಷಿಸುತ್ತದೆ. ಅದರಲ್ಲಿರುವ ಲೈಕೊಪೀನ್ ಸೆರಮ್ ಲಿಪಿಡ್ ಆಕ್ಸಿಡೇಷನ್‌ನ್ನು ತಡೆಯುತ್ತದೆ ಮತ್ತು ತನ್ಮೂಲಕ ಹೃದ್ರೋಗಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

► ಜೀರ್ಣಕ್ರಿಯೆಗೆ ನೆರವಾಗುತ್ತದೆ. ಮಲಬದ್ಧತೆ ಮತ್ತು ಅತಿಸಾರವನ್ನು ತಡೆಯುವಲ್ಲಿ ಟೊಮೆಟೊ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತದೆ.

 ► ಟೊಮೆಟೊ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ಅದರಲ್ಲಿಯ ವಿಟಾಮಿನ್ ಎ ದೃಷ್ಟಿಯನ್ನು ಚುರುಕುಗೊಳಿಸುವ ಜೊತೆಗೆ ರಾತ್ರಿ ಕುರುಡುತನವನ್ನು ತಡೆಯುತ್ತದೆ.

► ಟೊಮೆಟೊದಲ್ಲಿರುವ ಪೊಟ್ಯಾಷಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತದೆ.

► ಟೊಮೆಟೊವನ್ನು ಪ್ರತಿದಿನ ತಿನ್ನುವುದರಿಂದ ಟೈಪ್ 2 ಮಧುಮೇಹವನ್ನು ನಿಭಾಯಿಸಬಹುದಾಗಿದೆ.

► ದಿನವೂ ಟೊಮೆಟೊ ಸೇವನೆಯಿಂದ ಹಲ್ಲುಗಳು, ಮೂಳೆಗಳು ಮತ್ತು ಚರ್ಮಕ್ಕೆ ಹಲವಾರು ಆರೋಗ್ಯಲಾಭಗಳು ದೊರೆಯುತ್ತವೆ. ಅಲ್ಲದೆ ಬಿಸಿಲಿನ ಝಳಕ್ಕೆ ಚರ್ಮದ ಮೇಲೆ ಬೊಕ್ಕೆಗಳೆದ್ದಿದ್ದರೆ ಟೊಮೆಟೊ ರಸದ ಲೇಪನವು ಶಮನವನ್ನು ನೀಡುತ್ತದೆ.

► ಟೊಮೆಟೊ ಹೇರಳ ಪ್ರಮಾಣದಲ್ಲಿ ನೀರನು ಒಳಗೊಂಡಿದೆ. ಹೀಗಾಗಿ ಅದರ ಸೇವನೆಯು ಮೂತ್ರವಿಸರ್ಜನೆಯನ್ನು ಪ್ರಚೋದಿಸುತ್ತದೆ ಮತ್ತು ಮೂತ್ರನಾಳದ ಸೋಂಕುಗಳನ್ನು ತಡೆಯುತ್ತದೆ.

► ಟೊಮೆಟೊವನ್ನು ನಿಯಮಿತವಾಗಿ ತಿನ್ನುವುದರಿಂದ ಪಿತ್ತಕೋಶದಲ್ಲಿ ಕಲ್ಲುಗಳಾ ಗುವುದನ್ನು ತಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News