×
Ad

ಸೌದಿ ಅರೇಬಿಯಾ ಪ್ರವಾಸದಲ್ಲಿ ಎನ್‌ಆರ್‌ಐ ಫೋರಂ ಉಪಾಧ್ಯಕ್ಷೆ

Update: 2018-03-01 17:47 IST

ಬೆಂಗಳೂರು,ಮಾ.1:ರಾಜ್ಯ ಸರಕಾರದ ಅನಿವಾಸಿ ಭಾರತೀಯ ಫೋರಂ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಫೆ.22 ರಿಂದ 26ರವರೆಗೆ ಸೌದಿ ಅರೇಬಿಯಾದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ಕರ್ನಾಟಕದಿಂದ ವಲಸೆ ಹೋಗಿ ಸೌದಿ ಅರೇಬಿಯಾದ ಜಿದ್ದಾದಲ್ಲಿ ರಚಿಸಿಕೊಂಡಿರುವ ಅನಿವಾಸಿ ಕನ್ನಡಿಗ ಸಂಘಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸೌದಿ ಸರಕಾರವು ಸ್ಥಳೀಯ ನಿರುದ್ಯೋಗಿ ಯುವಕರಿಗೆ ಕೆಲಸಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹೊಸ ಕಾನೂನು ರೂಪಿಸಿದ್ದು, ಈ ಬೆಳವಣಿಗೆಯಿಂದ ಪ್ರಸ್ತುತ ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು ಅನಿವಾಸಿ ಕನ್ನಡಿಗರು ತಮ್ಮ ಕೆಲಸಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇತ್ತೀಚೆಗೆ ಸುಮಾರು 93 ಸಾವಿರ ಭಾರತೀಯ ಮೂಲದ ಉದ್ಯೋಗಿಗಳು ಸ್ವದೇಶಕ್ಕೆ ಹಿಂದಿರುಗಿರುವ ಬಗ್ಗೆ ಹಾಗೂ ಇಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಗಿದೆ.

ಇದೇ ವೇಳೆ, ಕನ್ನಡ ಮೂಲದ ಉದ್ದಿಮೆದಾರರು ಸ್ಥಾಪಿಸಿರುವ ಉದ್ಯಮಗಳಿಗೆ ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ಅನಿವಾಸಿ ಕನ್ನಡಿಗರನ್ನು ಭೇಟಿ ಮಾಡಿದ ಡಾ.ಆರತಿ ಕೃಷ್ಣ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮೂಲದ ಕಾರ್ಮಿಕ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.

ಭಾರತ ಮತ್ತು ಸೌದಿ ದೇಶಗಳ ಮಧ್ಯೆ ರಾಜತಾಂತ್ರಿಕ ಮಾತುಕತೆ ಕೈಗೊಳ್ಳಲು ರಾಜ್ಯ ಸರಕಾರದ ಅನಿವಾಸಿ ಭಾರತೀಯ ಸಮಿತಿಯು ಕೇಂದ್ರ ಸರಕಾರಕ್ಕೆ ಮನವಿ ಮಾಡಲಿದೆ. ಹಾಗೂ ಈಗಾಗಲೆ ರಾಜ್ಯ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ಅನಿವಾಸಿ ಭಾರತೀಯ ಕಲ್ಯಾಣ ಕಾರ್ಯಕ್ರಮಗಳ ನೀತಿಯಡಿ ಕೆಲಸ ಕಳೆದುಕೊಳ್ಳುತ್ತಿರುವಂತಹ ಕನ್ನಡಿಗರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಆರತಿ ಕೃಷ್ಣ ಭರವಸೆ ನೀಡಿದ್ದಾರೆ.

ರಾಜ್ಯ ಸರಕಾರದ ಅನಿವಾಸಿ ಭಾರತೀಯ ಸಮಿತಿಯ ಕಾರ್ಯ ವೈಖರಿ ಮತ್ತು ಇರುವಿಕೆಯಿಂದ ಹೊರದೇಶಗಳಲ್ಲಿ ವಾಸಿಸುತ್ತಿರುವ ನಮ್ಮಂತಹ ಕನ್ನಡಿಗರಿಗೆ ಹೆಚ್ಚು ಅನುಕೂಲಕತೆಗಳಾಗುತ್ತದೆ ಎಂದು ಅಲ್ಲಿ ನೆರೆದಿದ್ದ ನೌಕರರ ಭಾವನಾತ್ಮಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News