×
Ad

ಪಕ್ಕದ ಮನೆಯ ಸ್ನಾನದ ಕೊಠಡಿಗೆ ರಹಸ್ಯ ಕ್ಯಾಮೆರಾ ಅಳವಡಿಸಿದವನ ಬಂಧನ

Update: 2018-03-01 21:26 IST

ಬೆಂಗಳೂರು, ಮಾ.1: ಪಕ್ಕದ ಮನೆಯ ಸ್ನಾನದ ಕೊಠಡಿಗೆ ರಹಸ್ಯ ಕ್ಯಾಮೆರಾ ಇಟ್ಟು ಚಿತ್ರೀಕರಣ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಇಲ್ಲಿನ ಮೈಕೋ ಲೇಔಟ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮೈಕೋ ಲೇಔಟ್‌ನ ಸಾರ್ವಭೌಮನಗರದ ಜೀವನ್ ಸೇಠ್(46) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಾಪಾರ ಮಾಡುತ್ತಿದ್ದ ಆರೋಪಿ ಜೀವನ್, ರಹಸ್ಯವಾಗಿ ಪಕ್ಕದ ಮನೆಯಲ್ಲಿನ ಸ್ನಾನದ ಕೊಠಡಿಗೆ ತೆರಳಿ ಕ್ಯಾಮೆರಾ ಇಟ್ಟು ಬಂದಿದ್ದಾನೆ. ಸ್ನಾನ ಮಾಡುತ್ತಿದ್ದ ವೇಳೆ ಮಹಿಳೆ ಕಣ್ಣಿಗೆ ರಹಸ್ಯ ಕ್ಯಾಮೆರಾ ಕಂಡುಬಂದಿದ್ದು, ಪತಿಗೆ ವಿಷಯ ತಿಳಿಸಿ ವಿಚಾರಿಸಿದಾಗ ಪಕ್ಕದ ಮನೆಯ ವ್ಯಕ್ತಿಯೇ ಈ ಕೃತ್ಯವೆಸಗಿರುವುದಾಗಿ ತಿಳಿದುಬಂದಿದೆ. ಮಹಿಳೆಯು ನೀಡಿದ ದೂರು ದಾಖಲಿಸಿಕೊಂಡ ಮೈಕೋ ಲೇಔಟ್ ಠಾಣಾ ಪೊಲೀಸರು, ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News