ಬೆಂಗಳೂರು: ನೀರು ಶುದ್ಧೀಕರಣ ಘಟಕಕ್ಕೆ ಸಚಿವ ಜಾರ್ಜ್ ಚಾಲನೆ

Update: 2018-03-02 15:56 GMT

ಬೆಂಗಳೂರು, ಮಾ.2: ನಗರದ ಹಲಸೂರು ಕೆರೆ ಬಳಿ 3.98 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕವನ್ನು ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಸಿಕ್ಯೂವೆಷಿಯಲ್ ಬ್ಯಾಚ್ ರಿಯಾಕ್ಟರ್ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ದಿನನಿತ್ಯ 2 ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರನ್ನು ಈ ಘಟಕ ಶುದ್ಧೀಕರಣ ಮಾಡಲಿದೆ. ಈ ಮೂಲಕ ಸಾರ್ವಜನಿಕರಿಗೆ ಆರೋಗ್ಯಯುಕ್ತ ವಾತಾವರಣವನ್ನು ಕಲ್ಪಿಸುವ ಜೊತೆಗೆ ಶುದ್ಧ ನೀರನ್ನು ನೀಡಲಿದೆ ಎಂದರು.

ಈ ಶುದ್ಧೀಕರಣದ ಘಟಕ ಒಂದು ವರ್ಷದ ನಿರ್ವಹಣೆಗೆ 38.14 ಲಕ್ಷ ರೂ.ಗಳು ವೆಚ್ಚವಾಗಲಿದ್ದು, ಹತ್ತು ವರ್ಷಗಳ ನಂತರ 5.53 ಕೋಟಿ ರೂ.ಗಳಷ್ಟು ಖರ್ಚು ಮಾಡಬೇಕಾಗುತ್ತದೆ ಎಂದ ಅವರು, ಇಂದಿಲ್ಲಿ ಉದ್ಘಾಟನೆಗೊಂಡ ಈ ಘಟಕದಿಂದಾಗಿ ಹಲಸೂರು ಕೆರೆಯ ಗತ ವೈಭವವನ್ನು ಮರುಕಳಿಸಿದಂತೆ ಕಾಣುತ್ತದೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News