ಅಬುದಾಭಿ: ಬಿಡಬ್ಲ್ಯೂಎಫ್ ವತಿಯಿಂದ ವಿಚಾರ ಸಂಕಿರಣ

Update: 2018-03-04 12:51 GMT

ಅಬುದಾಭಿ, ಮಾ. 3: ದುಬೈಯ ಜನಪ್ರಿಯ ಹಾಗೂ ಪ್ರಮುಖ ಸಾಮಾಜಿಕ ಸಂಘಟನೆ ಬ್ಯಾರಿಸ್ ವೆಲ್ಫೇರ್ ಫೋರಂ (ಬಿಡಬ್ಲ್ಯೂಎಫ್) ಗಲ್ಫ್ ಕನ್ನಡಿಗರಿಗಾಗಿ ‘ಗ್ಲೋಬಲ್ ಇಕಾನಮಿ ಆ್ಯಂಡ್ ರಿಪರ್‌ಕಸ್ಯನ್ಸ್ ಆನ್ ಎನ್‌ಆರ್‌ಐಸ್’ ಕುರಿತು ಅಬುದಾಭಿಯ ಗ್ರಾಂಡ್ ಕಾಂಟಿನೆಂಟಲ್ ಹೊಟೇಲ್‌ನಲ್ಲಿ ಮಾರ್ಚ್ 1ರಂದು ವಿಚಾರ ಸಂಕಿರಣ ಆಯೋಜಿಸಿತ್ತು.

ಈ ವಿಚಾರ ಸಂಕಿರಣದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖ ಅನಿವಾಸಿ ಭಾರತೀಯರು ಪಾಲ್ಗೊಂಡಿದ್ದರು.

ಹೋಪ್ ಫೌಂಡೇಶನ್‌ನ ಸೈಫ್ ಸುಲ್ತಾನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ನ್ಯಾಯವಾದಿ ಸಾದುದ್ದೀನ್ ಸಾಲಿಹ್, ಅಲ್ತಾಫ್ ಖತೀಬ್ ಹಾಗೂ ಸಾಹಿಬಾನ್‌ನ ರಫೀಕ್ ಅಹ್ಮದ್, ಕೆಸಿಎಫ್‌ನ ಮುಹಮ್ಮದ್ ಹಕೀಮ್, ಐಸಿಸಿಯ ಅಬ್ದುಲ್ ಸಲಾಂ ದೇರಳಕಟ್ಟೆ ಮೊದಲಾದವರು ಮುಖ್ಯ ಅತಿಥಿಯಾಗಿದ್ದರು.

ಅಬ್ದುಲ್ ರಶೀದ್ ವಿ.ಕೆ ಪವಿತ್ರ ಕುರ್‌ಆನ್ ಪಠಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮಾದುಮೂಲೆ ಪ್ರಸ್ತಾವಿಕವಾಗಿ ಮಾತನಾಡಿದರು. ಬಿಡಬ್ಲ್ಯೂಎಫ್ನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಸ್ವಾಗತಿಸಿದರು.

ಉಪಾಧ್ಯಕ್ಷ ರಫೀಕ್ ಕೃಷ್ಣಾಪುರ, ಜಲೀಲ್ ಗುರುಪುರ ಹಾಗೂ ಇಮ್ರಾನ್ ಅಹ್ಮದ್ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಬಿಡಬ್ಲ್ಯೂಎಫ್ನ ಸೈಫ್ ಸುಲ್ತಾನ್ ಹಾಗೂ ನ್ಯಾಯವಾದಿ ಸಾದುದ್ದೀನ್ ಸಾಲಿಹ್ ಅವರನ್ನು ಗೌರವಿಸಲಾಯಿತು. ಬಿಡಬ್ಲ್ಯೂಎಫ್ನ ಉಪಾಧ್ಯಕ್ಷ ಅಬ್ದುಲ್ ರವೂಫ್ ವಂದಿಸಿದರು.

ಹಂಝ ಅಬ್ದುಲ್ ಖಾದರ್, ಮುಹಮ್ಮದ್ ಕಲ್ಲಾಪು, ನವಾಝ್ ಉಚ್ಚಿಲ್, ಕೋಶಾಧಿಕಾರಿ ಮುಹಮ್ಮದ್ ಸಿದ್ದೀಕ್ ಕಾಪು, ಅಬ್ದುಲ್ ಮಜೀದ್ ಎ.ಜಿ., ಕಾರ್ಯದರ್ಶಿ ಹಮೀದ್ ಗುರುಪುರ, ಮುಜೀಬ್ ಉಚ್ಚಿಲ, ನಝೀರ್ ಉಬರ್, ಸಿದ್ದೀಕ್ ಉಚ್ಚಿಲ, ಬಶೀರ್ ಬಜ್ಪೆ, ಹನೀಫ್ ಉಲ್ಲಾಳ, ಮೊಯ್ದಿನ್ ಹಂಡೇಲ್, ಮಜೀದ್ ಆತೂರು, ಇರ್ಫಾನ್ ಅಹ್ಮದ್, ರಶೀದ್ ಬಿಜೈ, ರಶೀದ್ ವಿ.ಕೆ., ಅಲ್ತಾಫ್ ಟಕ್ರೀರ್, ಬಶೀರ್ ಉಚ್ಚಿಲ್ ಇಮ್ರಾನ್ ಹಾಗೂ ಬಿಡಬ್ಲ್ಯೂಎಫ್ನ ಯುವ ಸ್ವಯಂ ಸೇವಕರು ಕಾರ್ಯಕ್ರಮ ಸಂಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News