×
Ad

ಆಯುರ್ವೇದದತ್ತ ಯುವ ಜನತೆ ಆಸಕ್ತಿ ವಹಿಸಲಿ: ಡಾ.ರಾಮಾಜೋಯಿಸ್

Update: 2018-03-04 20:40 IST

ಬೆಂಗಳೂರು, ಮಾ.4: ವೇದಗಳಷ್ಟೆ ಪ್ರಾಚೀನವಾದ ಆಯುರ್ವೇದ ಪ್ರಚಲಿತ ದಿನಗಳಲ್ಲಿ ಅಗತ್ಯವಾಗಿದ್ದು, ಇದರತ್ತ ಯುವ ಜನತೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಮಾಜಿ ರಾಜ್ಯಪಾಲ ಡಾ.ರಾಮಾಜೋಯಿಸ್ ಆಶಿಸಿದರು.

ರವಿವಾರ ಇಂಡಿಯಾ ಆಯುರ್ವೇದ ಫೌಂಡೇಶನ್ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಆಯೋಜಿಸಿದ್ದ ಲೇಖಕ ಡಾ.ಸಿ.ಎ.ಕಿಶೋರ್‌ರವರ ‘ಕಿಶೋರ್ ಸೂತ್ರ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇಂದಿನ ವೇಗದ ಜೀವನದಲ್ಲಿ ದೈನಂದಿನ ಚಟುವಟಿಕೆಗಳು ತಿರುಗುಮುರುಗಾಗಿದೆ. ಮಲಗಬೇಕಾದ ಸಮಯದಲ್ಲಿ ಕೆಲಸ ಮಾಡುವುದು, ಕೆಲಸ ಮಾಡಬೇಕಾದ ಸಮಯದಲ್ಲಿ ಮಲಗುವಂತಹ ಸ್ಥಿತಿಯಿದೆ. ಹೀಗಾಗಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಆಯುರ್ವೇದ ಸೂಚಿಸಿದ ಆಹಾರ ಕ್ರಮವನ್ನು ಅನುಸರಿಸುವುದು ಸೂಕ್ತವೆಂದು ಅವರು ಹೇಳಿದರು.

ನಾವು ಸಣ್ಣಪುಟ್ಟ ರೋಗಗಳಿಗೆ ದುಬಾರಿ ಖುರ್ಚು ಮಾಡುತ್ತಿದ್ದೇವೆ. ಆದರೆ, ನಮ್ಮ ಮನೆಯ ಅಕ್ಕಪಕ್ಕದಲ್ಲಿಯೆ ಹಲವು ಗಿಡಮೂಲಿಕೆಗಳಿದ್ದು, ಅದನ್ನ ಬಳಸಿ ಮನೆ ಔಷಧಿ ಮೂಲಕವೆ ರೋಗವನ್ನು ಗುಣ ಪಡಿಸಿಕೊಳ್ಳಬಹುದು. ಹೀಗಾಗಿ ಜನತೆ ಆಯುರ್ವೇದದ ಜ್ಞಾನ ಹೊಂದಿರುವುದು ಅಗತ್ಯವೆಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ರಾಮಚಂದ್ರೇಗೌಡ, ಹಿರಿಯ ನಟಿ ತಾರಾ, ನಿರ್ದೇಶಕ ಟಿ.ಎನ್.ಸೀತಾರಾಮ್ ಹಾಗೂ ಲೇಖಕ ಡಾ.ಡಾ.ಸಿ.ಎ. ಕಿಶೋರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News