ವಾಟ್ಸ್ ಆ್ಯಪ್ ‘ಡಿಲಿಟ್ ಫಾರ್ ಎವರಿ ಒನ್’ನಲ್ಲಿ ಸಮಯಾವಕಾಶ ಹೆಚ್ಚಳ

Update: 2018-03-04 17:22 GMT

ಹೊಸದಿಲ್ಲಿ, ಮಾ.4: ಯಾರಿಗಾದರೂ ನಾವು ಕಳುಹಿಸಿದ ಸಂದೇಶವನ್ನು ವಾಟ್ಸ್ಯಾಪ್ ನಲ್ಲಿ ಅಳಿಸಿ ಹಾಕಲು ವಾಟ್ಸ್ಯಾಪ್ ತನ್ನ ಬಳಕೆದಾರರಿಗೆ ‘ಡಿಲಿಟ್ ಫಾರ್ ಎವರಿ ಒನ್’ ಫೀಚರನ್ನು ನೀಡಿತ್ತು. ಆದರೆ ಮೆಸೇಜ್ ಕಳುಹಿಸಿದ 7 ನಿಮಿಷಗಳೊಳಗಾಗಿ ಆ ಸಂದೇಶವನ್ನು ಅಳಿಸಿ ಹಾಕಬೇಕಾಗಿತ್ತು. ಇದೀಗ ವಾಟ್ಸ್ಯಾಪ್ ಈ ಸಮಯಾವಕಾಶವನ್ನು ಹೆಚ್ಚಿಸಿದೆ ಎಂದು WABetaInfo  ವರದಿ ಮಾಡಿದೆ.

ವಾಟ್ಸ್ಯಾಪ್ ಆಂಡ್ರಾಯ್ಡ್ ಬೆಟಾ ವರ್ಶನ್ 2.18.69ನಲ್ಲಿ ಈ ಸಮಯಾವಕಾಶ ಈಗಾಗಲೇ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಇದರರ್ಥ ವಾಟ್ಸ್ಯಾಪ್ ಆಂಡ್ರಾಯ್ಡ್ ಬೆಟಾ ಟೆಸ್ಟರ್ಸ್ಟ್ ಮಾತ್ರ ಈ ಫೀಚರ್ ಸಮಯಾವಕಾಶ ಹೆಚ್ಚಳದ ಪ್ರಯೋಜನ ಪಡೆಯಬಹುದಾಗಿದೆ.

ಪ್ರಕಾರ 7 ನಿಮಿಷಗಳವರೆಗೆ ಇದ್ದ ಸಮಯವನ್ನು 1 ಗಂಟೆ 8 ನಿಮಿಷಗಳವರೆಗೆ ಹೆಚ್ಚಿಸಲಾಗಿದೆಯಂತೆ. ಕಳೆದ ವರ್ಷದ ನವೆಂಬರ್ ನಲ್ಲಿ ವಿಶ್ವಾದ್ಯಂತ ಆ್ಯಂಡ್ರಾಯ್ಡ್, ಐಒಎಸ್ ಹಾಗು ವಿಂಡೋಸ್ ಬಳಕೆದಾರರಿಗೆ ವಾಟ್ಸ್ಯಾಪ್ ‘ಡಿಲಿಟ್ ಫಾರ್ ಎವರಿ ಒನ್’ ಫೀಚರನ್ನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News