×
Ad

ಬೆಂಗಳೂರು: ಮಾ.6ಕ್ಕೆ ದಲಿತ ಉದ್ದಿಮೆದಾರರ ಸಮಾವೇಶ

Update: 2018-03-04 23:00 IST

ಬೆಂಗಳೂರು, ಮ. 4: ದಲಿತ ಸಮುದಾಯದಲ್ಲಿನ ಉದ್ಯಮಶೀಲತೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಮಾ.6ರ ಸಂಜೆ 6ಗಂಟೆಗೆ ಇಲ್ಲಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ‘ಕರ್ನಾಟಕ ದಲಿತ ಉದ್ದಿಮೆದಾರರ ಸಮಾವೇಶ’ವನ್ನು ಎಸ್ಸಿ-ಎಸ್ಟಿ ಉದ್ದಿಮೆದಾರರ ಸಂಘದಿಂದ ಏರ್ಪಡಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶವನ್ನು ಉದ್ಘಾಟಿಸಲಿದ್ದು, ಎಸ್ಸಿ-ಎಸ್ಟಿ ಉದ್ದಿಮೆದಾರರ ಸಂಘದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಎಚ್.ಆಂಜನೇಯ, ಆರ್.ವಿ.ದೇಶಪಾಂಡೆ, ಡಾ.ಮಹದೇವಪ್ಪ, ರಮೇಶ್ ಜಾರಕಿಹೊಳಿ, ರುದ್ರಪ್ಪ ಲಮಾಣಿ, ಆರ್.ಬಿ.ತಿಮ್ಮಾಪುರ, ಪ್ರಿಯಾಂಕ್ ಖರ್ಗೆ, ಡಾ.ಎಂ.ಸಿ.ಮೋಹನಕುಮಾರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ.

ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ಅಪರ ಮುಖ್ಯ ಕಾರ್ಯದರ್ಶಿಗಳಾದ ವಿಜಯಭಾಸ್ಕರ್, ಎಂ.ಲಕ್ಷ್ಮಿನಾರಾಯಣ, ಡಿ.ವಿ.ಪ್ರಸಾದ್, ಬಿ.ಎಚ್.ಅನಿಲ್ ಕುಮಾರ್, ಡಾ.ಇ.ವೆಂಕಟಯ್ಯ, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಆಯುಕ್ತ ಮಂಜುನಾಥ ಪ್ರಸಾದ್, ರಾಜೇಂದರ್ ಕುಮಾರ್ ಕಠಾರಿಯಾ, ದರ್ಪಣ್ ಜೈನ್ ಸೇರಿ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆಂದು ಸಂಘದ ಕಾರ್ಯಾಧ್ಯಕ್ಷ ಸಿ.ಜೆ.ಶ್ರೀನಿವಾಸನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News