ತುಂಬೆ ಅಶ್ರಫ್ ರಿಗೆ ಬಿಸಿಎಫ್ ಗೌರವ ಪ್ರಶಸ್ತಿ

Update: 2018-03-06 05:49 GMT

ದುಬೈ, ಮಾ. 6: ಪ್ರಖ್ಯಾತ ತುಂಬೆ ಸಮೂಹ ಸಂಸ್ಥೆಗಳಿಗೆ ಒಳಪಟ್ಟ ಅಜ್ಮಾನಿನ ಮೊಹಿಯುದ್ದೀನ್ ವುಡ್ ವರ್ಕ್ಸ್ ಇದರ ನಿರ್ದೇಶಕ ಅಶ್ರಫ್ ತುಂಬೆ ಅವರಿಗೆ ದುಬೈಯ ಪ್ರತಿಷ್ಠಿತ ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ 'Honour Of Appreciation' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಬ್ಯಾರೀಸ್ ಕಲ್ಚರಲ್ ಫೋರಮ್ ಇದರ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್ ಹಾಗೂ ಉಪಾಧ್ಯಕ್ಷರುಗಳಾದ ಎಂ.ಇ. ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ ಹಾಗೂ ಅಫೀಕ್ ಹುಸೈನ್ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಮರದ ಆಯಾತ ಮತ್ತು ನಿರ್ಯಾತ ಉದ್ದಿಮೆಯಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಖ್ಯಾತವಾದ ಹಾಗೂ ಯುಎಇ ಯಲ್ಲಿ ಈ ಕ್ಷೇತ್ರದಲ್ಲಿ ಅತ್ಯಂತ ಬೃಹತ್ ಉದ್ಯಮ ಸಂಸ್ಥೆಗಳಲ್ಲಿ ಒಂದು ಎಂದು ಗುರುತಿಸಲ್ಪಡುವ ಮೊಹಿಯುದ್ದೀನ್ ವುಡ್ ವರ್ಕ್ಸ್ ಇದರ ರೂವಾರಿಯಾಗಿರುವ ಅಶ್ರಫ್ ತುಂಬೆ ಅವರು ನೂರಾರು ಕನ್ನಡಿಗರಿಗೆ ಉದ್ಯೋಗ ನೀಡಿ ನೆರವಾಗಿರುವುದು ಮಾತ್ರವಲ್ಲದೆ, ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವಾ ರಂಗದಲ್ಲಿ ಸಕ್ರಿಯರಾಗಿದ್ದು, ಯಾವುದೇ ಪ್ರಚಾರ ವಿಲ್ಲದೆ ಮೌನವಾಗಿ ಕರ್ನಾಟಕದ ಅನಿವಾಸಿಗರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಓರ್ವ ಸಮಾಜ ಪ್ರೇಮಿ ಉದ್ಯಮಿ. ಅವರ ಈ ಅಮೂಲ್ಯವಾದ ಸೇವೆಯನ್ನು ಗುರುತಿಸಿ ಬ್ಯಾರೀಸ್ ಕಲ್ಚರಲ್ ಫೋರಮ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News