×
Ad

ಬಡ ಮಹಿಳೆಯರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ

Update: 2018-03-06 22:08 IST

ಬೆಂಗಳೂರು, ಮಾ.6: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದಲ್ಲಿರುವ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಡ ಮಹಿಳೆಯರಿಗೆ ಉಚಿತವಾಗಿ ಊಟ ಒದಗಿಸಲಾಗುತ್ತದೆ ಎಂದು ಮೇಯರ್ ಆರ್.ಸಂಪತ್‌ರಾಜ್ ಪ್ರಕಟಿಸಿದರು.

ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪಾಲಿಕೆ ವತಿಯಿಂದ ವಿಶಿಷ್ಟವಾಗಿ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ ಮಹಿಳಾ ಸದಸ್ಯರ ಪರವಾಗಿ ಅಂದು ಬೆಂಗಳೂರಿನಲ್ಲಿರುವ ಬಡ ಮಹಿಳೆಯರು ಇಂದಿರಾ ಕ್ಯಾಂಟೀನ್‌ಗೆ ಬಂದಾಗ ಅವರಿಗೆ ಉಚಿತವಾಗಿ ಊಟ, ತಿಂಡಿ ಒದಗಿಸಲಾಗುವುದು. ಇದರ ಮೊತ್ತವನ್ನು ಪಾಲಿಕೆಯೇ ಭರಿಸಲಿದೆ ಎಂದು ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News