ಡೆಲ್ಲಿ ಡೇರ್ ಡೆವಿಲ್ಸ್‌ಗೆ ಗಂಭೀರ್ ನಾಯಕ

Update: 2018-03-07 09:32 GMT

ಹೊಸದಿಲ್ಲಿ, ಮಾ.7: ಮುಂಬರುವ ಐಪಿಎಲ್ ಟೂರ್ನಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕನಾಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗಂಭೀರ್ ದಿಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ದಿಲ್ಲಿ ಐಪಿಎಲ್ ತಂಡದ ನಾಯಕನಾಗಿ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದ ಗಂಭೀರ್ 2011ರಲ್ಲಿ ಕೋಲ್ಕತಾದ ಫ್ರಾಂಚೈಸಿಗೆ ಸೇರ್ಪಡೆಯಾಗಿದ್ದರು.

ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ 2012 ಹಾಗೂ 2014ರಲ್ಲಿ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿತ್ತು. 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಗಂಭೀರ್ 2.8 ಕೋ.ರೂ.ಗೆ ದಿಲ್ಲಿ ತಂಡದ ಪಾಲಾಗಿದ್ದರು.

 ‘‘ನಾನು ಹಿಂದೆಂದಿಗಿಂತಲೂ ಹೆಚ್ಚು ಸಂತೋಷಗೊಂಡಿದ್ದೇನೆ. ತಂಡಕ್ಕೆ ವಾಪಸಾಗುವ ಉದ್ದೇಶದಿಂದ ಪಂದ್ಯ ಆಡಬಾರದು. ಟೂರ್ನಿ ಗೆಲ್ಲಬೇಕೆಂಬ ಗುರಿ ಹಾಕಿಕೊಂಡಿದ್ದೇನೆ. ನಾಯಕನಾಗಿ ತಂಡದ ಗೆಲುವಿಗೆ ನೆರವಾಗುತ್ತೇನೆ’’ ಎಂದು ಗಂಭೀರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News