ಪ್ರಾಣಿ-ಪಕ್ಷಿಗಳನ್ನೊಳಗೊಂಡ ಪರಿಸರದ ಜೊತೆಗಿನ ಸಹ ಜೀವನವೇ ನಿಜವಾದ ಶಿಕ್ಷಣದ ಆಶಯ: ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ಮಾ.10: ವೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ ತಿಪ್ರಾಣಿ-ಪಕ್ಷಿಗಳನ್ನೊಳಗೊಂಡ ಪರಿಸರದ ಜೊತೆ ಸಹ ಜೀವನ ನಡೆಸುವುದೆ ನಿಜವಾದ ಶಿಕ್ಷಣದ ಆಶಯಳಿಸಿದರು.
ಅಭಿನವ ಪ್ರಕಾಶನ ಕುಣಿಗಲ್ ತಾಲೂಕಿನ ಹೊಡಾಘಟ್ಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿ.ಪಿ.ರಾಜರತ್ನಂ ನೆನಪಿನ ಶ್ರೀಗಂಧಕುಟಿ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇವತ್ತು ಸಮಾಜ ವಿಘಟಿತವಾಗುತ್ತಿದೆ. ನಗರದ ಮನುಷ್ಯ ಏಕಾಂಗಿಯಾಗುತ್ತಿದ್ದಾನೆ. ಆದರೆ, ಹಳ್ಳಿಗಳಲ್ಲಿ ಕಲಿಯುವಿಕೆಯಲ್ಲಿಯೂ ಸಾಮುದಾಯಿಕತೆ ಉಳಿದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕನ್ನಡದ ಅತ್ಯುತ್ತಮ ವಿಜ್ಞಾನಿಗಳು, ಸಾಹಿತಿಗಳು, ಎಂಜಿನಿಯರ್‌ಗಳು, ವೈದ್ಯರು, ನ್ಯಾಯಾಧೀಶರು ಕನ್ನಡ ಶಾಲೆಗಳಲ್ಲಿ ಕಲಿತಿದ್ದಾರೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಭಾರತದಲ್ಲಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ನಮ್ಮದು. ಅವರೆಲ್ಲರೂ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು. ಹೀಗಾಗಿ ಸರಕಾರಿ ಶಾಲೆ ಎನ್ನುವ ಅಳುಕು ಬೇಡವೆಂದು ಅವರು ತಿಳಿಸಿದರು.
ಅಭಿನವ ಪ್ರಕಾಶನದ ನ.ರವಿಕುಮಾರ್ ಮಾತನಾಡಿ, ಎಲ್ಲವನ್ನೂ ಸರಕಾರ ಮಾಡಲಿ ಎಂದು ಕಾಯುವುದಕ್ಕಿಂತ ನಮ್ಮ ಊರಿನ ಶಾಲೆಯನ್ನು, ಓದಿದ ಶಾಲೆಯನ್ನು ಅಭಿವೃದ್ಧಿಪಡಿಸಿದರೆ ಅದಕ್ಕಿಂತ ದೊಡ್ಡ ಸಮಾಜ ಸೇವೆ ಬೇರೊಂದಿಲ್ಲ. ಕುಣಿಗಲ್ ತಾಲೂಕಿನ ಬೇರೆ ಬೇರೆ ಶಾಲೆಗಳಲ್ಲಿಯೂ ಗ್ರಂಥಾಲಯಗಳನ್ನು ಆರಂಭಿಸಲು ಕೋರಿಕೆಗಳು ಬಂದಿದ್ದು, ಮುಂದಿನ ದಿನಗಳಲ್ಲಿ ಕುಣಿಗಲ್ ತಾಲೂಕಿನ 430 ಶಾಲೆಗಳಲ್ಲಿ ಶ್ರೀಗಂಧ ಕುಟಿ ಗ್ರಂಥಾಲಯವನ್ನು ಆರಂಭಿಸಲಾಗುವುದು ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ಪ್ರಕಾಶಕ ಎಚ್.ವಿ. ಶ್ರೀನಿವಾಸಮೂರ್ತಿ ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು. ಕವಯತ್ರಿ ಪಿ.ಚಂದ್ರಿಕಾ, ನಾಟಕಕಾರ ಹುಲಿಕುಂಟೆ ಮೂರ್ತಿ, ಸಹಶಿಕ್ಷಕಿ ರೂಪಾ, ಗ್ರಾಮ ಪಂಚಾಯತ್ ಸದಸ್ಯ ನಾಗರಾಜು ಮತ್ತಿತರರಿದ್ದರು.