ಬರಲಿದೆ...ಶಂಕಿತರನ್ನು ಗುರುತಿಸುವ ಸ್ಮಾರ್ಟ್ ಗ್ಲಾಸ್

Update: 2018-03-13 18:30 GMT

ಚೀನಾದ ರಾಜಧಾನಿ ಬೀಜಿಂಗ್ ನಗರದ ಹೊರವಲಯದಲ್ಲಿ ಕಳೆದ ವಾರ ಸ್ಥಳೀಯ ಪೊಲೀಸರು ಹೊಸ ಭದ್ರತಾ ಉಪಕರಣವೊಂದನ್ನು ಪರೀಕ್ಷಿಸಿದ್ದಾರೆ. ಅವರು ಕಣ್ಣಿಗೆ ಹಾಕಿಕೊಂಡಿದ್ದ ಸ್ಮಾರ್ಟ್ ಗ್ಲಾಸ್‌ಗಳು, ವಾಹನಚಾಲಕರ ಮುಖಚಹರೆಗಳನ್ನು ಹಾಗೂ ವಾಹನದ ಕಾರುನೋಂದಣಿ ಸಂಖ್ಯೆಗಳನ್ನು ಗುರುತಿಸುತ್ತದೆ ಹಾಗೂ ಅವುಗಳನ್ನು ತಮ್ಮ ಬಳಿಯಿರುವ ಶಂಕಿತ ಆರೋಪಿಗಳ ದತ್ತಾಂಶ(ಡಾಟಾಬೇಸ್)ಗಳ ತುಲನೆ ಮಾಡುತ್ತದೆ. ಒಂದು ವೇಳೆ ಕಪ್ಪುಪಟ್ಟಿಯಲ್ಲಿರುವ ಶಂಕಿತರ ಚಹರೆಯೊಂದಿಗೆ ಅವು ಹೋಲಿಕೆಯಾದ ಕೂಡಲೇ ಕನ್ನಡಕದಲ್ಲಿ ಚೌಕಾಕೃತಿಯಲ್ಲಿ ಕೆಂಪುಬೆಳಕು ಮೂಡಿಬರುತ್ತದೆ. ಇದರಿಂದಪೊಲೀಸರಿಗೆ ತಕ್ಷಣವೇ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿದೆ.
   ಕೃತಕಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವ ಈ ಕನ್ನಡಕವನ್ನು ಎಲ್‌ಎಲ್ ವಿಶನ್ ಎಂಬ ಸಂಸ್ಥೆ ವಿನ್ಯಾಸಗೊಳಿಸಿದೆ. ದೇಶದ ಭದ್ರತೆಗೆ ಉತ್ತೇಜನ ನೀಡಲು ಅತ್ಯಾಧುನಿಕ ತಂತ್ರಜ್ಞಾನದ ಆವಿಷ್ಕಾರಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಚೀನಾದ ನಾಯಕರು ಸಂಸತ್‌ನ ವಾರ್ಷಿಕ ಸಭೆಯಲ್ಲಿ ಪ್ರತಿಪಾದಿಸಿದ ಸಂದರ್ಭದಲ್ಲೀ ಈ ಸ್ಮಾರ್ಟ್ ಕನ್ನಡಕಗಳ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿದೆ.
ಅಂದಹಾಗೆ, ಚೀನಾ ಸರಕಾರವು ಸ್ಮಾರ್ಟ್‌ಗ್ಲಾಸ್‌ನಂತಹ ಅತ್ಯಾಧುನಿಕ ಉಪಕರಣಗಳನ್ನು ಭವಿಷ್ಯದಲ್ಲಿ ಸರಕಾರಿ ವಿರೋಧಿ ಪ್ರತಿಭಟನಾಕಾರರನ್ನು ದಮನಿಸಲು ಬಳಸುವ ಸಾಧ್ಯತೆಯೂ ಇದೆಯೆಂಬ ಬಗ್ಗೆ ಆತಂಕಗಳು ವ್ಯಕ್ತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News