ಯುದ್ಧಪೀಡಿತ ಸಿರಿಯದಲ್ಲಿ 2017ರಲ್ಲಿ 910 ಮಕ್ಕಳ ಹತ್ಯೆ: ಯುನಿಸೆಫ್

Update: 2018-03-14 11:11 GMT

ಜನೀವ, ಮಾ.14: ಸಿರಿಯದಲ್ಲಿ ಕಳೆದ ವರ್ಷ  910 ಮಕ್ಕಳ ಹತ್ಯೆ ನಡೆದಿದೆ ಎಂದು ಯುನಿಸೆಫ್ ತಿಳಿಸಿದೆ.  ಯುದ್ಧ ಪೀಡಿತ ಪ್ರದೇಶದಲ್ಲಿ 2016ರಲ್ಲಿ  652 ಮಕ್ಕಳ ಹತ್ಯೆಯಾಗಿತ್ತು. ಜೊತೆಗೆ  ಸೇನೆಯ ದಾಳಿಗಳಲ್ಲಿ ಮಕ್ಕಳೇ  ಹೆಚ್ಚು ಬಲಿಯಾಗುತ್ತಿದ್ದಾರೆ. ಜನವಸತಿ  ಪ್ರದೇಶಗಳಲ್ಲಿ ದಾಳಿ ನಡೆಯುತ್ತಿದೆ ಎಂದು ಯುನಿಸೆಫ್ ವರದಿಯಲ್ಲಿದೆ.

 ಈ ವರದಿಯನ್ನು ಮಂಗಳವಾರ ವಿಶ್ವಸಂಸ್ಥೆಯ ಮಕ್ಕಳ ಸಂಘಟನೆಯಾದ ಯುನಿಸೆಫ್ ಪ್ರಕಟಿಸಿದೆ. 2015ರಲ್ಲಾದ ಮಕ್ಕಳ ಹತ್ಯೆಗಿಂತ ಮೂರು ಪಟ್ಟು ಹೆಚ್ಚು 2017ರಲ್ಲಿ ಮಕ್ಕಳ ಹತ್ಯೆಯಾಗಿವೆ. ಇವೆಲ್ಲ ಲಭ್ಯವಾಗಿರುವ ವಿವರಗಳು. ಆದರೆ  ಮಕ್ಕಳ ಸಾವಿನ ಸಂಖ್ಯೆ ಇನ್ನೂ ಹೆಚ್ಚು ಇರಬಹುದು ಎಂದು  ಯುನಿಸೆಫ್ ವಕ್ತಾರ ಮರಿಕ್ಸಿ ಮೆರ್ಕಾಡೊ ತಿಳಿಸಿದರು.

ಸಿರಿಯದಲ್ಲಿ  5. 3 ಮಿಲಿಯನ್ ಮಕ್ಕಳಿಗೆ ಸಹಾಯದ ಅಗತ್ಯವಿದೆ. 2.8 ಮಿಲಿಯನ್ ಮಕ್ಕಳಿಗೆ ತುರ್ತು ಸಹಾಯ ಬೇಕಿದೆ. 2.6 ಮಿಲಿಯನ್ ಮಕ್ಕಳು ನಿರಾಶ್ರಿತರಾಗಿದ್ದಾರೆ. 1.7 ಮಿಲಿಯನ್ ಮಕ್ಕಳು ಶಾಲೆಗೆ ಹೋಗುವುದಿಲ್ಲ. 1.3 ಮಿಲಿಯನ್ ಮಕ್ಕಳು ಶಾಲೆಯನ್ನು ತೊರೆದಿ ದ್ದಾರೆ ಎಂದು  ಯುನಿಸೆಫ್ ಬಹಿರಂಗಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News