36 ಕೆಎಎಸ್ ಅಧಿಕಾರಿಗಳ ವರ್ಗಾವಣೆ

Update: 2018-03-14 13:12 GMT

ಬೆಂಗಳೂರು, ಮಾ.14: ರಾಜ್ಯ ಸರಕಾರವು 36 ಮಂದಿ ಕೆಎಎಸ್ ಅಧಿಕಾರಿಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ-ಎಂ.ಎಲ್.ವೈಶಾಲಿ, ಚಿಕ್ಕಮಗಳೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ-ಕುಮಾರ, ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ-ಮೇಜರ್ ಸಿದ್ದಲಿಂಗಯ್ಯ ಎಸ್.ಹಿರೇಮಠ್, ಬೆಂಗಳೂರಿನ ವಿಶ್ವೇಶ್ವರಯ್ಯ ಜಲ ನಿಗಮ(ವಿಜೆಎನ್‌ಎಲ್)ದ ಮುಖ್ಯ ಆಡಳಿತಾಧಿಕಾರಿ-ಸಿ.ಅನಿತಾ.

ಧಾರವಾಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ-ಎಸ್.ಜೆ.ಸೋಮಶೇಖರ್, ತುಮಕೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ-ಇಬ್ರಾಹೀಂ ಮೈಗೂರು, ಬಾಗಲಕೋಟೆ ಜಿಲ್ಲೆಯ ಅಪರ ಜಿಲ್ಲಾಧಿಕಾರಿ-ಶಶಿಧರ್ ಕುರೇರ, ಕಲಬುರಗಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ-ಅಶೋಕ್ ದುಡಗುಂಟಿ.

ಬೀದರ್ ಜಿಲ್ಲೆಯ ಅಪರ ಜಿಲ್ಲಾಧಿಕಾರಿ-ಭೀಮಾಶಂಕರ್, ಬೆಂಗಳೂರಿನ ಬಿಡಿಎ ಉಪ ಕಾರ್ಯದರ್ಶಿ-3: ಎಚ್.ಎಸ್.ಸತೀಶ್‌ಬಾಬು, ಹಾಸನ ಜಲ್ಲೆಯ ಎನ್‌ಎಚ್‌ಎಐ ವಿಶೇಷ ಭೂಸ್ವಾಧೀನಾಧಿಕಾರಿ-ಡಾ.ಎಂ.ದಾಸೇಗೌಡ, ಮೈಸೂರಿನ ಚೆಸ್ಕಾಂ(ಆಡಳಿತ ಮತ್ತು ಮಾ.ಸಂ) ಪ್ರಧಾನ ವ್ಯವಸ್ಥಾಪಕ-ಪಿ.ಜಯಮಾಧವ.

ಬೀದರ್ ಉಪ ವಿಭಾಗ ಉಪ ವಿಭಾಗಾಧಿಕಾರಿ-ಎಂ.ರಾಚಪ್ಪ, ಮಂಗಳೂರಿನ ಕೆಐಎಡಿಬಿ ಬೈಕಂಪಾಡಿ ಕೈಗಾರಿಕಾ ವಲಯದ ವಿಶೇಷ ಭೂಸ್ವಾಧೀನಾಧಿಕಾರಿ- ಜಿ.ಎನ್.ಮಂಜುನಾಥ್, ರಾಮನಗರ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ-ಡಾ.ಎಂ.ಎನ್.ರಾಜೇಂದ್ರಪ್ರಸಾದ್, ಜಮಖಂಡಿ ಕೃಷ್ಣ ಮೇಲ್ದಂಡೆ ಯೋಜನೆಯ ಪುನರ್‌ವಸತಿ ಅಧಿಕಾರಿ-ಡಾ.ಶಂಕರಪ್ಪ ವಣಿಕ್ಯಾಳ್.

ಕಲಬುರಗಿಯ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ-ಶರಣಬಸಪ್ಪ ಕೊಟ್ಟೆಪ್ಪಗೋಳ್, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ-ಮಹೇಶ್ ಕರ್ಜಗಿ, ಕಲಬುರಗಿ ಜಿಲ್ಲೆಯ ಭಾರಿ ಮತ್ತು ಮಧ್ಯಮ ನೀರಾವರಿ ವಿಶೇಷ ಭೂ ಸ್ವಾಧೀನಾಧಿಕಾರಿ-ಶೀಲವಂತ ಎಂ.ಶಿವಕುಮಾರ್, ವಿಜಯಪುರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ- ಡಾ.ಬಿ.ಶರಣಪ್ಪ.

ಬೆಂಗಳೂರಿನ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ(ಶಿಷ್ಟಾಚಾರ)-ನಂಜುಂಡೇಗೌಡ, ಬೆಳಗಾವಿ ಜಿಲ್ಲೆಯ ಕೆ-ಶಿಪ್ ಸಹಾಯಕ ಆಯುಕ್ತ-ಗೀತಾ ಈ.ಕೌಲಗಿ, ಇಂಡಿ ತಾಲೂಕಿನ ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ-ಪಿ.ಎನ್.ಲೋಕೇಶ್, ಧಾರವಾಡ ಉಪ ವಿಭಾಗದ ಉಪ ವಿಭಾಗಾಧಿಕಾರಿ-ಎನ್.ಮುಹಮ್ಮದ್ ಝುಬೇರ್.

ರಾಮನಗರ ಜಿಲ್ಲಾಧಿಕಾರಿ ಕಚೇರಿಯ ವಿಶೇಷ ಭೂ ಸ್ವಾಧೀನಾಧಿಕಾರಿ- ಎ.ಸಿ.ರೇಣುಕಾ ಪ್ರಸಾದ್, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಪ ವಿಭಾಗದ ಉಪ ವಿಭಾಗಾಧಿಕಾರಿ-ಅಝೀಝ್ ದೇಸಾಯಿ, ವಿಜಯಪುರ ಉಪ ವಿಭಾಗದ ಉಪ ವಿಭಾಗಾಧಿಕಾರಿ-ರವೀಂದ್ರ ಕರಲಿಂಗಣ್ಣವರ್, ಬಾಗಲಕೋಟೆ ಉಪ ವಿಭಾಗದ ಉಪ ವಿಭಾಗಾಧಿಕಾರಿ-ಎಚ್.ಜಯಾ.

ಬೆಂಗಳೂರಿನ ಬಿಡಿಎ ವಿಶೇಷ ಭೂ ಸ್ವಾಧೀನಾಧಿಕಾರಿ-ಎಂ.ಎನ್.ಮಂಜುನಾಥ್, ಮಡಿಕೇರಿ ಉಪ ವಿಭಾಗದ ಉಪ ವಿಭಾಗಾಧಿಕಾರಿ-ರವಿಚಂದ್ರ ನಾಯಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಎತ್ತಿನಹೊಳೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ-ಡಾ.ಎನ್.ಆರ್.ಗೀತಾ, ಬೀದರ್ ಜಿಲ್ಲೆಯ ಬಸವಕಲ್ಯಾಣ ಉಪ ವಿಭಾಗದ ಉಪ ವಿಭಾಗಾಧಿಕಾರಿ-ಪ್ರೀತಂ ನಸ್ಲಾಪುರೆ.

ಹರಪ್ಪನಹಳ್ಳಿ ಉಪ ವಿಭಾಗದ ಉಪ ವಿಭಾಗಾಧಿಕಾರಿ-ರಾಜಶೇಖರ್ ಡಂಬಳ್, ಬೆಂಗಳೂರಿನ ಬಿಡಿಎ ಉಪ ಕಾರ್ಯದರ್ಶಿ-2: ಆರ್.ಅನಿಲ್‌ಕುಮಾರ್, ಹುಬ್ಬಳ್ಳಿಯ ನವನಗರ ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ(ಮಾ.ಸಂ ಮತ್ತು ಆಡಳಿತ)-ಕವಿತಾ ಯೋಗಪ್ಪನವರ್, ಜಮಖಂಡಿ ಉಪ ವಿಭಾಗದ ಉಪ ವಿಭಾಗಾಧಿಕಾರಿ-ಜಿ.ನಜ್ಮಾರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News