ಲಾಹೋರ್: ಶರೀಫ್ ನಿವಾಸದ ಸಮೀಪ ಸ್ಫೋಟ; 9 ಸಾವು

Update: 2018-03-15 16:07 GMT

ಲಾಹೋರ್, ಮಾ. 15: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಇಲ್ಲಿನ ಮನೆ ಸಮೀಪ ಸಂಭವಿಸಿದ ಪ್ರಬಲ ಸ್ಫೋಟವೊಂದರಲ್ಲಿ ಮೂವರು ಪೊಲೀಸರು ಸೇರಿದಂತೆ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ.

ಶರೀಫ್ ಕುಟುಂಬದ ಅರಮನೆಯಂತಹ ಮನೆಯಿಂದ ಕೆಲವೇ ಕಿಲೋಮೀಟರ್ ದೂರವಿರುವ ಪೊಲೀಸ್ ತಪಾಸಣಾ ಠಾಣೆಯ ಸಮೀಪ ಸ್ಫೋಟ ಸಂಭವಿಸಿದೆ.

‘‘ಸ್ಫೋಟದಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 7 ಮಂದಿ ಪೊಲೀಸರು. ನಾಲ್ವರು ಪೊಲೀಸರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ’’ ಎಂದು ‘ರೆಸ್ಕೂ 1122’ ವಕ್ತಾರರೊಬ್ಬರು ಪಿಟಿಐಗೆ ತಿಳಿಸಿದರು.

ಅದೇ ವೇಳೆ, ಮೃತಪಟ್ಟವರ ಪೈಕಿ ಮೂವರು ಪೊಲೀಸರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ಹೇಳಿದರು.

ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿ ಸ್ಫೋಟ ನಡೆಸಲಾಗಿತ್ತು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News