ಕಳುಹಿಸಿದವರಿಗೆ ತಿಳಿಯದೆಯೇ ವಾಟ್ಸ್ಯಾಪ್ ಸಂದೇಶಗಳನ್ನು ಓದುವುದು ಹೇಗೆ ?

Update: 2018-03-16 08:56 GMT

ಸ್ನೇಹಿತರೊಬ್ಬರು ನಿಮಗೆ ಕಳುಹಿಸಿದ ವಾಟ್ಸ್ಯಾಪ್ ಸಂದೇಶವನ್ನು ನೀವು ಓದಿದ್ದರೂ ಅದಕ್ಕೆ ರಿಪ್ಲೈ ಮಾಡದೇ ಇದ್ದಾಗ ಸ್ನೇಹಿತರಿಗೆ ಬೇಸರವಾಗಬಹುದು. ಕೆಲವೊಮ್ಮೆ ನಾವು ಓದಿದ ಸಂದೇಶಗಳಿಗೆ ರಿಪ್ಲೈ ಮಾಡಲು ನಮಗಿಷ್ಟವಿಲ್ಲದೇ ಇರಬಹುದು. ಇಂತಹ ಸಂದರ್ಭಗಳಲ್ಲಿ ಮೆಸೇಜ್ ಕಳುಹಿಸಿದವರಿಗೆ ತಿಳಿಯದೆಯೇ ಮೆಸೇಜ್ ಗಳನ್ನು ಓದಲು ವಾಟ್ಸ್ಯಾಪ್ ನಲ್ಲಿ ಕೆಲವು ಆಯ್ಕೆಗಳಿವೆ. ಈ ಮೂಲಕ ನೀವು ಬೇರೆಯವರು ಕಳುಹಿಸಿದ ಸಂದೇಶಗಳನ್ನು ಅವರಿಗೆ ತಿಳಿಯದಂತೆಯೇ ಓದಬಹುದಾಗಿದೆ. 

ಸಂದೇಶ ಕಳುಹಿಸಿದವರಿಗೆ ನೀವು ಅವರ ಸಂದೇಶ ಓದಿದ್ದೀರಾ ಅಥವಾ ಇಲ್ಲವೇ ಎಂಬುದು ಬ್ಲೂ ಟಿಕ್ ಮೂಡಿದಾಗ ತಿಳಿಯುತ್ತದೆ. ಈ ಬ್ಲೂ ಟಿಕ್ ಫೀಚರ್ ಕಾರ್ಯಾಚರಿಸದಂತೆ ಮಾಡುವುದು ಹಾಗೂ ನೀವು ಸಂದೇಶ ಓದಿದ್ದೀರೇ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಸ್ನೇಹಿತರಿಗೆ ತಿಳಿಯದಂತೆ ಮಾಡುವ ಉಪಾಯ ಈ ಕೆಳಗಿದೆ.

ನೋಟಿಫಿಕೇಶನ್ ಬಾರ್ ಅನ್ನು ಕೆಳಕ್ಕೆ ಎಳೆಯಿರಿ: ಹೀಗೆ ಮಾಡಿದಾಗ ಪ್ರತಿಯೊಂದು ಸಂದೇಶದ ಆರಂಭದ ಭಾಗವನ್ನು ನೋಡಬಹುದು.

ಏರ್ ಪ್ಲೇನ್ ಮೋಡ್ ಉಪಯೋಗಿಸಿ: ಸಂದೇಶ ಬಂದಿದೆಯೆಂದ ಕೂಡಲೇ ಅದನ್ನು ತೆರೆಯಬೇಡಿ. ನೋಟಿಫಿಕೇಶನ್ ಬಾರ್ ಅನ್ನು ಕೆಳಕ್ಕೆ ಎಳೆದು ಅಥವಾ ಸೆಟ್ಟಿಂಗ್ಸ್ ನಲ್ಲಿ ಏರ್ ಪ್ಲೇನ್ ಮೋಡ್ ಗೆ ಟಿಕ್ ಮಾಡಿ. ನಂತರ ಆಫ್ ಲೈನ್ ನಲ್ಲಿ ವಾಟ್ಸ್ಯಾಪ್ ತೆರೆದು ಸಂದೇಶಗಳನ್ನು ಓದಿ. ನಂತರ ವಾಟ್ಸ್ಯಾಪ್ ಕ್ಲೋಸ್ ಮಾಡಿ ಏರ್ ಪ್ಲೇನ್ ಮೋಡ್ ಅನ್ನು ಡಿಸೇಬಲ್ ಮಾಡಿ.

ರೀಡ್ ರಿಸೀಪ್ಟ್ ಗಳನ್ನು ಡಿಸೇಬಲ್ ಮಾಡಿ: ನಿಮಗೆ ಸಂದೇಶ ಕಳುಹಿಸಿದವರಿಗೆ ನೀವು ಅವರ ಸಂದೇಶವನ್ನು ಓದಿದ್ದೀರೇ ಅಥವಾ ಇಲ್ಲವೇ ಎಂದು ತಿಳಿಯುವುದು ಬೇಡವೆಂದಾದರೆ ರೀಡ್ ರಿಸೀಪ್ಟ್ ಡಿಸೇಬಲ್ ಮಾಡಿ. ಇದಕ್ಕಾಗಿ ವಾಟ್ಸ್ಯಾಪ್ ಸೆಟ್ಟಿಂಗ್ ಗೆ ಹೋಗಿ ಅಕೌಂಟ್ ಫೀಚರ್ ಟ್ಯಾಪ್ ಮಾಡಿ. ಅಲ್ಲಿ ಪ್ರೈವೆಸಿ ಆಪ್ಶನ್ ತೆರೆದು ರೀಡ್ ರಿಸೀಪ್ಸ್ಟ್ ಟಿಕ್ ತೆಗೆದು ಬಿಡಿ.

ವಾಟ್ಸ್ಯಾಪ್ ಪಾಪ್-ಅಪ್ಸ್:  ಈ ಹಿಂದೆ ಇದು ಬಹಳಷ್ಟು ಜನಪ್ರಿಯವಾಗಿತ್ತಲ್ಲದೆ ಎಲ್ಲರೂ ಉಪಯೋಗಿಸುತ್ತಿದ್ದರು. ಆದರೆ ಅದು ಈಗಲೂ ಲಭ್ಯವಿದೆ ಎಂದು ಹಲವರು ಮರೆತೇ ಬಿಟ್ಟಿದ್ದಾರೆ. ಇದನ್ನು ಎನೇಬಲ್ ಮಾಡಲು  ವಾಟ್ಸ್ಯಾಪ್ ಸೆಟ್ಟಿಂಗ್ಸ್ ನಲ್ಲಿ ನೋಟಿಫಿಕೇಶನ್ಸ್ ಸೆಲೆಕ್ಟ್ ಮಾಡಿ ನಂತರ ಮೆಸೇಜ್ ನೋಟಿಫಿಕೇಶನ್ಸ್ ಟ್ಯಾಪ್ ಮಾಡಿ ಅಲ್ಲಿರುವ Only when screen “off”, Always show pop-up and Only when screen “on” ಈ ಮೂರು ಆಯ್ಕೆಗಳಲ್ಲಿ ಒಂದನ್ನು ಆರಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News