ತುಂಬೆ ಸಮೂಹದ ಟೆರೆಸ್ ರೆಸ್ಟೊರೆಂಟ್‌ನಲ್ಲಿ ಸಿಗಲಿದೆ ಕರಾವಳಿ ಖಾದ್ಯಗಳು

Update: 2018-03-17 17:49 GMT

ಶಾರ್ಜಾ, ಮಾ.17: ಶಾರ್ಜಾದ ರೊಲ್ಲದಲ್ಲಿರುವ ತುಂಬೆ ಸಮೂಹದ ಆತಿಥ್ಯ ವಿಭಾಗದ ಬಹುಖಾದ್ಯ ರೆಸ್ಟೊರೆಂಟ್‌ಗಳ ಸರಣಿಯ ಟೆರೆಸ್ ರೆಸ್ಟೊರೆಂಟ್‌ನಲ್ಲಿ ಕರಾವಳಿ ಪಾಕಶಾಲೆಗೆ ಚಾಲನೆ ನೀಡಲಾಗಿದೆ. ತುಂಬೆ ಸಮೂಹದ ಮಂಡಳಿಯ ಸದಸ್ಯ ಹಾಗೂ ವಿತ್ತ ಮತ್ತು ಬಜೆಟ್ ವಿಭಾಗದ ನಿರ್ದೇಶಕರಾದ ನಝೀರ್ ಹುಸೇನ್ ಪಿ. ಹಾಗೂ ಮಲಯಾಳಂ ನಟಿ ಹಾಗೂ ಆರ್‌ಜೆ ಮೀರಾ ನಂದನ್ ಕರಾವಳಿ ಖಾದ್ಯಗಳ ವಿಭಾಗ ಚಾಲನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕರಾವಳಿ ಪಾಕಶಾಲೆಯು ಭಾರತದ ನೈಋತ್ಯ ಕರಾವಳಿ ಭಾಗದ ಪ್ರಸಿದ್ಧ ಆಹಾರಗಳನ್ನು ಒಳಗೊಂಡಿದೆ. ಇದರಲ್ಲಿ ಕೇರಳ, ಮಂಗಳೂರು ಮತ್ತು ಗೋವಾದ ವಿಶಿಷ್ಟ ಖಾದ್ಯಗಳನ್ನು ಗ್ರಾಹಕರಿಗೆ ಉಣಬಡಿಸಲಾಗುವುದು ಎಂದು ತುಂಬೆ ಸಮೂಹದ ಆತಿಥ್ಯ ವಿಭಾಗದ ನಿರ್ದೇಶಕರಾದ ಫರ್ಹಾದ್ ಸಿ. ತಿಳಿಸಿದ್ದಾರೆ. ರೊಲ್ಲದಲ್ಲಿ ದಕ್ಷಿಣ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದರಿಂದ ಈ ಭಾಗದಲ್ಲಿ ನಾವು ಕರಾವಳಿ ಪಾಕಶಾಲೆಯನ್ನು ತೆರೆಯಲು ಯೋಚಿಸಿದೆವು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News