ನುಸ್ರತುಲ್ ಮಸಾಕೀನ್ ಅಸೋಸಿಯೇಶನ್ ದಮ್ಮಾಮ್ ಘಟಕದ ಮಹಾಸಭೆ

Update: 2018-03-18 07:19 GMT

ದಮ್ಮಾಮ್, ಮಾ.18: ಕುಂದಾಪುರದ ನುಸ್ರತುಲ್ ಮಸಾಕೀನ್ ಅಸೋಸಿಯೇಶನ್(ಎನ್.ಎಂ.ಎ.) ಇದರ ದಮ್ಮಾಮ್ ಘಟಕದ 14ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದಮ್ಮಾಮ್‌ನಲ್ಲಿ ನಡೆಯಿತು.

ದಮ್ಮಾಮ್‌ನ ಅಲ್ ಖಯ್ಯಾಮ್ ಹೊಟೇಲಿನಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಅಬೂಬಕರ್ ಮುಹಮ್ಮದಲಿ ಕೋಡಿ ವಹಿಸಿದ್ದರು. ಕಾವಳಕಟ್ಟೆ ಹಝ್ರತ್ ಸಭೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭ ಎನ್.ಎಂ.ಎ. ಕೇಂದ್ರ ಸಮಿತಿಯ ಅಧ್ಯಕ್ಷ ಮುಹಮ್ಮದ್ ತಾಹಿರ್ ಹಸನ್ ಕುಂದಾಪುರ ನೇತೃತ್ವದಲ್ಲಿ ಎನ್.ಎಂ.ಎ. ಕುಂದಾಪುರದ ಕೋಡಿಯಲ್ಲಿ ನಿರ್ಮಿಸಿರುವ ಸೌಹಾರ್ದ ಭವನದಲ್ಲಿ ಶೀಘ್ರದಲ್ಲೇ ಆರಂಭಿಸಲಿರುವ ತಾಂತ್ರಿಕ ತರಬೇತಿ ಕೇಂದ್ರ ಮತ್ತು ಪಾಲಿ ಕ್ಲಿನಿಕ್‌ನ ಮಾದರಿಯನ್ನು ಕಾವಳಕಟ್ಟೆ ಹಝ್ರತ್ ಅನಾವರಣಗೊಳಿಸಿ ಶುಭ ಹಾರೈಸಿದರು.

ಸಭೆಯಲ್ಲಿ ದಮ್ಮಾಮ್ನ ಅಬೂಬಕರ್ ಪಡುಬಿದ್ರೆ, ಶರೀಫ್ ಕಾರ್ಕಳ, ಕೆ.ಎಂ.ಅಬ್ದುಲ್ ರಹ್ಮಾನ್ ಕೋಡಿ, ಫಾರೂಕ್ ಕಾಟಿಪಳ್ಳ ಮತ್ತು ಸಿರಾಜ್ ಶಿರ್ವ, ಅಸ್ಲಂ ಕೋಯಾ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ಘಟಕದ 2018ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ದಮ್ಮಾಮ್ ಘಟಕದ ಅಧ್ಯಕ್ಷರಾಗಿ ಅಬೂಬಕರ್ ಮುಹಮ್ಮದಲಿ ಕೋಡಿ 15ನೇ ಬಾರಿ ಆಯ್ಕೆಯಾದರು.

ಇಸ್ಮಾಯೀಲ್ ಕಾಟಿಪಳ್ಳ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಕೆ.ಎಂ.ಉಸ್ಮಾನ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ರಶೀದ್ ಬೆಂಗಳೂರು ಹಾಡಿನ ಮೂಲಕ ಶುಭ ಹಾರೈಸಿದರು. ಕೆ.ಎಂ.ಉಸ್ಮಾನ್ ವಂದಿಸಿದರು. ನೌಶಾದ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News