ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯ ಶ್ರೀ ಪ್ರಶಸ್ತಿ, ಗೌರವ ಪ್ರಶಸ್ತಿ ಪ್ರದಾನ
ಬೆಂಗಳೂರು,ಮಾ.19: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಸಾಹಿತಿ, ಲೇಖಕರಿಗೆ 2017ರ ಸಾಲಿನ ‘ಗೌರವ’, ‘ಸಾಹಿತ್ಯ ಶ್ರೀ’ ಪ್ರಶಸ್ತಿಗಳು ಹಾಗೂ 2016ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ ಪ್ರದಾನ ಮಾಡಿದರು.
ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಸಮಾರಂಭದಲ್ಲಿ 2017ನೇ ಸಾಲಿನ ’ಗೌರವ’, ’ಸಾಹಿತ್ಯಶ್ರೀ’ ಪ್ರಶಸ್ತಿಗಳು ಹಾಗೂ 2016ನೇ ಸಾಲಿನ ’ಪುಸ್ತಕ ಬಹುಮಾನ’ ನೀಡಲಾಯಿತು.
ಈ ವೇಳೆ ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ ಮಾತನಾಡಿ, ಸಾಹಿತ್ಯದ ದೃಷ್ಟಿಕೋನದಲ್ಲಿ ಶ್ರೀಮಂತಿಕೆ ಕಂಡುಕೊಂಡು ಸಮೃದ್ದಿಯಾಗಿರಬೇಕು. ಸಾಂಸ್ಕೃತಿಕ ಕ್ಷೇತ್ರದ ಪ್ರತಿಯೊಂದು ಪ್ರಾಕಾರಗಳು ಬಡವಾಗದೆ ವಿಜೃಂಭಣೆಯಿಂದ ಇದ್ದಾಗ ಅಸ್ತಿತ್ವದಲ್ಲಿರುತ್ತದೆ. ಅದಕ್ಕೆ ಕಾರಣರಾದ ಸಾಧಕರನ್ನು ಗುರುತಿಸಬೇಕಿದೆ ಎಂದರು.
ಹಿರಿಯರು ಯಾರೊಬ್ಬರು ಪ್ರಶಸ್ತಿ ಕೇಳುವುದಿಲ್ಲ. ಅವರನ್ನು ಗುರುತಿಸಿ ಪ್ರಶಸ್ತಿ ನೀಡಬೇಕಾದದ್ದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಇರುವುದನ್ನು ಮಾಡಿಕೊಂಡು ಹೋಗುವುದಕ್ಕಿಂತ ಹೊಸದನ್ನು ಗುರುತಿಸಿ ಸಾಧನೆಗೈಯಬೇಕು ಎಂದು ಉಮಾಶ್ರೀ ಹೇಳಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್, ಡಾ. ಅರವಿಂದ ಮಾಲಗತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ಅಕಾಡೆಮಿ ಅಧ್ಯಕ್ಷ ಡಾ. ಅರವಿಂದ ಮಾಲಗತ್ತಿ, ರಿಜಿಸ್ಟ್ರಾರ್ ಸಿದ್ದರಾಮ್ ಸಿಂಧೆ ಉಪಸ್ಥಿತರಿದ್ದರು.
ಗೌರವ ಪ್ರಶಸ್ತಿ ಪುರಸ್ಕೃತರು: ಬನ್ನಂಜೆ ಗೋವಿಂದಾಚಾರ್ಯ, ಪ್ರೊ. ಸೋಮಶೇಖರ್ ಇಮ್ರಾಪುರ, ಪ್ರೊ.ಎಚ್.ಜೆ. ಲಕ್ಕಪ್ಪಗೌಡ, ಪ್ರೊ.ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ, ಕಸ್ತೂರಿ ಬಾಯರಿ.
ಸಾಹಿತ್ಯ ಶ್ರೀ ಪ್ರಶಸ್ತಿ: ಪ್ರೊ. ಧರಣೇಂದ್ರ ಕುರಕುರಿ, ಫಕೀರ್ ಮುಹಮ್ಮದ್ ಕಟ್ಪಾಡಿ, ಡಾ. ವಿಜಯಶ್ರೀ ಸಬರದ, ಡಾ.ವಿ. ಮುನಿವೆಂಕಟಪ್ಪ, ಡಾ. ನಟರಾಜ್ ಹುಳಿಯಾರ್, ಡಾ.ಕೆ.ಕೇಶವಶರ್ಮ, ಡಾ.ಕರೀಗೌಡ ಬೀಚನಹಳ್ಳಿ, ಪ್ರೊ. ತೇಜಸ್ವಿ ಕಟ್ಟೀಮನಿ, ಡಾ. ಕಮಲಾ ಹೆಮ್ಮಿಗೆ, ಕಂಚ್ಯಾಣಿ ಶರಣಪ್ಪ.
ಪುಸ್ತಕ ಬಹುಮಾನ ಪುರಸ್ಕ್ರತರು: ಕೃಷ್ಣಮೂರ್ತಿ ಬಿಳಿಗೆರೆ, ಬಸವರಾಜ್ ಹೃತ್ಸಾಕ್ಷಿ, ರೇಖಾ ಕಾಖಂಡಕಿ, ಜಯಪ್ರಕಾಶ್ ಮಾವಿನಕುಳಿ, ಸುಧೀರ್ ಅತ್ತಾವರ್, ಬಿ.ವಿ. ಭಾರತಿ, ಡಾ.ಬಿ.ಎಸ್. ತಲ್ವಾಡಿ, ಪ್ರೀತಿ ನಾಗರಾಜ್, ಡಾ.ಎಸ್. ನಟರಾಜ್ ಬೂದಾಳು, ಡಾ. ವೀರೇಶ ಬಡಿಗೇರ, ನಿರ್ಮಲಾ ಸುರತ್ಕಲ್, ಡಾ.ಎ.ಎಸ್. ಕುಮಾರಸ್ವಾಮಿ, ಡಾ. ಸಣ್ಣರಾಮ, ಡಾ. ಶರತ್ ಚಂದ್ರಸ್ವಾಮಿ, ಎ.ಆರ್. ಮಣಿಕಾಂತ್, ಹ.ಚ.ನಟೇಶ ಬಾಬು, ಎಂ. ಅಬ್ದುಲ್ ರೆಹಮಾನ್ ಪಾಷ, ರಾಜೇಶ್ವರಿ ತೇಜಸ್ವಿ ಮತ್ತು ಶಾಂತಿ ಕೆ. ಅಪ್ಪಣ್ಣ.
ದತ್ತಿ ಬಹುಮಾನಿತರು: ಚೈತ್ರಿಕಾ ಶ್ರೀಧರ್ ಹೆಗಡೆ, ಮುಹಮ್ಮದ್ ಕುಳಾಯಿ, ಡಾ. ಗುರುಪಾದ ಕೆ. ಹೆಗಡೆ ಎಸ್. ಶಿವಾನಂದ, ಸ.ರಘುನಾಥ, ಡಾ.ಕೆ.ಬಿ. ಶ್ರೀಧರ್, ರಶ್ಮಿ ತೇರದಾಳ.