×
Ad

ಬೆಂಗಳೂರು: ತಾಯಿ-ಮಗಳು ಆತ್ಮಹತ್ಯೆ

Update: 2018-03-19 20:48 IST

ಬೆಂಗಳೂರು, ಮಾ.19: ಕ್ಷುಲ್ಲಕ ಕಾರಣಕ್ಕೆ ಮನನೊಂದು ತಾಯಿ ಮತ್ತು ಪುತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ನಡೆದಿದೆ.

ಸಾವಿತ್ರಮ್ಮ (67) ಮೃತ ತಾಯಿಯಾಗಿದ್ದು, ಮಂಜುಳಾ (37) ಪುತ್ರಿ ಎಂದು ಪೊಲೀಸರು ಗುರುತಿಸಿದ್ದಾರೆ.

ಮೂಲತಃ ಮಂಡ್ಯದವರಾಗಿದ್ದ ಸಾವಿತ್ರಮ್ಮ ಮತ್ತು ಮಂಜುಳಾ ಕೆಲ ವರ್ಷಗಳಿಂದ ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು. ಮಂಜುಳಾಗೆ 37 ವರ್ಷಗಳಾದ್ದರೂ ಮದುವೆ ಆಗಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.

ನಾಲ್ಕು ದಿನಗಳಿಂದ ಮನೆಯಿಂದ ಹೊರಗಡೆ ಎಲ್ಲೂ ತಾಯಿ-ಪುತ್ರಿ ಕಾಣಿಸಿಕೊಳ್ಳದ ಕಾರಣ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸಾವಿತ್ರಮ್ಮ ಮನೆಗೆ ಬಂದು ಪರಿಶೀಲಿಸಿದಾಗ ಮೂರು ದಿನದ ಹಿಂದೆ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News