ಬೆಂಗಳೂರಿನಿಂದ ಉತ್ತರ ಕೊರಿಯಕ್ಕೆ ಓಲಾ ಕ್ಯಾಬ್ ಬುಕ್ ಆದಾಗ…!

Update: 2018-03-19 16:12 GMT

ಬೆಂಗಳೂರು, ಮಾ.19: ಜೀವನದಲ್ಲಿ ಒಂದು ಬಾರಿಯಾದರೂ ವಿಶ್ವ ಪರ್ಯಟನೆ ಮಾಡಬೇಕು ಎಂಬ ಆಸೆ ಹಲವರಿಗಿರುತ್ತದೆ. ಆದರೆ ಕೆಲವೊಮ್ಮೆ ಹಣಕಾಸಿನ ಅಡಚಣೆ ಎದುರಾಗುತ್ತದೆ. ಆದರೆ ಇಲ್ಲೊಬ್ಬರು ಕಡಿಮೆ ಖರ್ಚಿನಲ್ಲಿ ವಿಶ್ವ ಪರ್ಯಟನೆ ಮಾಡಬಹುದೇ ಎಂದು ಪರೀಕ್ಷಿಸಲು ಹೋಗಿ ಪೇಚಿಗೀಡಾಗಿದ್ದಾರೆ.

ಇವರ ಹೆಸರು ರೋಹಿತ್ ಮೆಂಡಾ. ಬೆಂಗಳೂರಿನ ನಿವಾಸಿ. ಇವರು ತಮ್ಮ ಓಲಾ ಆ್ಯಪ್ ನಿಂದ ಉತ್ತರ ಕೊರಿಯಾ ಟ್ರಿಪ್ ಗೆ ಕ್ಯಾಬ್ ಬುಕ್ ಮಾಡಿದ್ದರು, ತಮಾಷೆಯೆಂದರೆ ಉತ್ತರ ಕೊರಿಯಾಗೆ ರೋಹಿತ್ ರ ಟ್ರಿಪ್ ಬುಕ್ ಆಗಿತ್ತಲ್ಲದೆ, ದಿನಾಂಕಗಳನ್ನು ಮತ್ತು ಚಾಲಕನ ಹೆಸರನ್ನೂ ಕಳುಹಿಸಲಾಗಿತ್ತು. ಇಷ್ಟೇ ಅಲ್ಲದೆ ಈ ಟ್ರಿಪ್ ಗಾಗಿ ಬರೋಬ್ಬರಿ 1,49,088 ರೂ.ಗಳನ್ನು ಬಿಲ್ ಮಾಡಲಾಗಿತ್ತು!.

ಇದನ್ನು ಕಂಡ ರೋಹಿತ್ ಒಂದು ಕ್ಷಣ ಆಶ್ಚರ್ಯಕ್ಕೊಳಗಾಗಿದ್ದರು. ತಕ್ಷಣ ಅವರು ಓಲಾ ಆ್ಯಪ್ ನ ಸ್ಕ್ರೀನ್ ಶಾಟ್ ಗಳನ್ನು ತೆಗೆದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. “ಉತ್ತರ ಕೊರಿಯಾಗೆ ಟ್ರಿಪ್ ಮಾಡಲು ಹೇಗೆ ಸಾಧ್ಯ?” ಎಂದವರು ಓಲಾವನ್ನು ಟ್ವೀಟ್ ಮೂಲಕ ಪ್ರಶ್ನಿಸಿದ್ದರು. ತಕ್ಷಣ ಪ್ರತಿಕ್ರಿಯಿಸಿದ ಓಲಾ, “ಇದು ತಾಂತ್ರಿಕ ಸಮಸ್ಯೆಯಾಗಿರಬಹುದು. ದಯವಿಟ್ಟು ನಿಮ್ಮ ಫೋನನ್ನು ರಿ ಸ್ಟಾರ್ಟ್ ಮಾಡಿ” ಎಂದು ಪ್ರತಿಕ್ರಿಯಿಸಿದೆ.

ಅಷ್ಟಕ್ಕೂ ಉತ್ತರ ಕೊರಿಯಾಗೆ ಟ್ರಿಪ್ ಹೋಗಲು ಸಾಧ್ಯವಿದೆಯೇ?, ಸಾಧ್ಯವಿಲ್ಲದಿದ್ದರೆ ಬಿಲ್ ಸಹಿತ ಚಾಲಕನ ವಿವರಗಳೂ ರೋಹಿತ್ ಗೆ ತಲುಪಿದ್ದು ಹೇಗೆ ಎಂದು ಟ್ವಿಟರಿಗರು ಪ್ರಶ್ನಿಸುತ್ತಿದ್ದರೆ, “ಇದು ತಾಂತ್ರಿಕ ಸಮಸ್ಯೆ” ಎಂದು ಓಲಾ ಉತ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News