ಮೆಟ್ರೋ ಸಿಬ್ಬಂದಿ ಮುಷ್ಕರ ಹಿಂದಕ್ಕೆ: ಹೈಕೋರ್ಟ್‌ಗೆ ಹೇಳಿಕೆ
ಬೆಂಗಳೂರು, ಮಾ.20: ಮಹತ್ವದ ಬೆಳವಣಿಗೆಯೊಂದರಲ್ಲಿ ಮಾರ್ಚ್ 22 ರಂದು ನಮ್ಮ ಮೆಟ್ರೋ ಸಿಬ್ಬಂದಿ ನಡೆಸಲು ತೀರ್ಮಾನಿಸಿದ್ದ ಮುಷ್ಕರವನ್ನು ಕೈಬಿಡಲು ನಿರ್ಧರಿಸಿದ್ದಾರೆ.
ಮಾರ್ಚ್ 22 ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲವೆಂದು ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೆಟ್ರೋ ಸಿಬ್ಬಂದಿ ಮಾರ್ಚ್ 22 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಇದೀಗ 22ಕ್ಕೆ ಮುಷ್ಕರ ಕೈಬಿಡಲು ಮೆಟ್ರೋ ನೌಕರರ ಸಂಘ ತೀರ್ಮಾನಿಸಿದ್ದು, ಈ ಬಗ್ಗೆ ಹೈಕೋರ್ಟ್‌ಗೆ ಹೇಳಿಕೆ ನೀಡಿದೆ.
ಮುಷ್ಕರ ಕೈಬಿಟ್ಟಿರೋದು ಮಾತ್ರವಲ್ಲದೇ ಮುಷ್ಕರ ಒಂದು ತಿಂಗಳ ಕಾಲ ಮುಂದೂಡುವುದಕ್ಕೆ ಮೆಟ್ರೋ ನೌಕರರ ಸಂಘ ಒಪ್ಪಿಕೊಂಡಿದೆ. ಅಲ್ಲದೇ, ಹೈಕೋರ್ಟ್ ಬಿಎಂಆರ್‌ಸಿಎಲ್ ಮತ್ತು ಮೆಟ್ರೋ ನೌಕರರ ನಡುವೆ ಸಂಧಾನ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. 26 ರಂದು ಸಂಧಾನ ಮಾತುಕತೆ ನಡೆಸುವಂತೆಯೂ ಹೈಕೋರ್ಟ್ ಸೂಚಿಸಿದೆ.
ಸಂಧಾನ ಸಭೆಗೆ ಮೆಟ್ರೋ ನೌಕರರ ಸಂಘದಿಂದ ನಾಲ್ವರ ಹೆಸರು ಹಾಗೂ ಮೆಟ್ರೋದಿಂದ ಮೂವರು ಅಧಿಕಾರಿಗಳ ಹೆಸರನ್ನು ಸಲ್ಲಿಸಲಾಗಿದೆ. ಇನ್ನು ಮೆಟ್ರೋ ನೌಕರರ ಸಂಘದ ಮಾನ್ಯತೆಗೆ ಮನವಿ ಮಾಡಲಾಗಿದ್ದು, ಮೆಟ್ರೋ ಪರ ವಕೀಲರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.